"ತಿಮ್ಮನ ಮೊಟ್ಟೆಗಳು" ಚಿತ್ರಕ್ಕೆ "Honorable Jury Mention Award"
14 ನೇ ದಾದ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ"ದಲ್ಲಿ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ "ತಿಮ್ಮನ ಮೊಟ್ಟೆಗಳು" ಚಿತ್ರಕ್ಕೆ "Honorable Jury Mention Award" ದೊರೆತಿದೆ. ಏಪ್ರಿಲ್ 30 ರಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರ ತಂಡ ಪ್ರಶಸ್ತಿ ಸ್ವೀಕರಿಸಿತು. ನಿರ್ದೇಶಕರೇ ಬರೆದ "ಕಾಡಿನ ನೆಂಟರು" ಪುಸ್ತಕ ಆಧರಿಸದ ಕಥೆ ತಿಮ್ಮನ ಮೊಟ್ಟೆಗಳು ಚಿತ್ರಕ್ಕಿದೆ. ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣ ಚಿತ್ರಕ್ಕಿದೆ.



Social Plugin