ಸಸ್ಪೆನ್ಸ್ ಆಕ್ಷನ್ ಥ್ರಿಲರ್ ಇರುವ ಕಥಾಹಂದರ ವಿರುವ ವಿಲೇಜ್ ರೋಡ್ ಫಿಲಂಸ್ ಲಾಂಛನದಲ್ಲಿ ವಿನೋದ್ ಶೇಷಾದ್ರಿ ನಿರ್ಮಿಸಿರುವ, ಗಿರಧರ್ ಹೆಚ್ ಟಿ ನಿರ್ದೇಶನದ "ಪರಿಮಳಾ ಡಿಸೋಜ" ಚಿತ್ರ ಕಳೆದವರ್ಷ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಈಗ ಈ ಚಿತ್ರ ಜಿಯೊ ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ. ಯಾವುದೇ ನೆಟವರ್ಕ್ ಹೊಂದಿರುವವರು ಈ ಚಿತ್ರವನ್ನು ಉಚಿತವಾಗಿ ಈ ಚಿತ್ರವನ್ನು ವೀಕ್ಷಿಸಬಹುದು.
ಕೋಮಲ ಬನವಾಸೆ, ಭವ್ಯ, ವಿನೋದ್ ಶೇಷಾದ್ರಿ,ಶ್ರೀನಿವಾಸ್ ಪ್ರಭು, ಶಿವಕುಮಾರ್ ಅರಾಧ್ಯ, ಮೀಸೆ ಅಂಜನಪ್ಪ ನಾಗಮಂಗಲ ಜಯರಾಮಣ್ಣ, ಉಗ್ರಂ ರೆಡ್ಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ರಾಮ್ ಛಾಯಾಗ್ರಹಣ, ಕ್ರಿಸ್ಟೋಫರ್ ಜೇಸನ್ ಸಂಗೀತ ನಿರ್ದೇಶನ ಹಾಗೂ ಸಂಜೀವ ರೆಡ್ಡಿ ಸಂಕಲನ "ಪರಿಮಳ ಡಿಸೋಜ" ಚಿತ್ರಕ್ಕಿದೆ.
Social Plugin