"ಅನ್ಪ್ಲಕ್ಡ್ ವಿತ್ ಮಯೂರ"GOD. (ಗ್ಯಾಂಗ್ ಆಫ್ ಡೈರೆಕ್ಟರ್ಸ್) 
ಏಪ್ರಿಲ್ 7 ರಂದು ಭಾರತೀಯ ಸಂಗೀತ ನಿರ್ದೇಶಕರಿಗಾಗಿ ನಡೆಯಲಿದೆ ಸಂಗೀತ ರಸ ಸಂಜೆ. ಖ್ಯಾತ ರೇಡಿಯೋ ಜಾಕಿ ಮತ್ತು ಚಲನಚಿತ್ರ ನಿರ್ದೇಶಕ ಶ್ರೀ ಮಯೂರ ರಾಘವೇಂದ್ರ ಆಯೋಜಿಸಿರುವ
ಭಾರತೀಯ ಚಲನಚಿತ್ರ ನಿರ್ದೇಶಕರಿಗಾಗಿ ಮರೆಯಲಾಗದ ಸಂಗೀತ ರಸ ಸಂಜೆ ಕಾರ್ಯಕ್ರಮ. ಅನ್ಪ್ಲಕ್ಡ್ ವಿತ್ ಮಯೂರ GOD (ಗ್ಯಾಂಗ್ ಆಫ್ ಡೈರೆಕ್ಟರ್). ಕಾರ್ಯಕ್ರಮವನ್ನು ಏಪ್ರಿಲ್ 07 2024 ಶಂಕರ ಫೌಂಡೇಶನ್, ದೊಡ್ಡ ಕಲ್ಲಸಂದ್ರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.ಈ ಸಂಗೀತ ರಸ ಸಂಜೆ ಕಾರ್ಯಕ್ರಮವು ನಾಡಿನ ಖ್ಯಾತ ಹಾಡುಗಾರರಾದ ಮಾಳವಿಕಾ ಸುಂದರ್ ,ಐಶ್ವರ್ಯ ರಂಗರಾಜನ್ , ಕೀರ್ತನ್ ಹೊಳ್ಳ ಮತ್ತು ನಿಶಾನ್ ರೈ ಇವರುಗಳು ತಮ್ಮ ಹಾಡುಗಳ ಮೂಲಕ ತಮ್ಮನ್ನು ಮನಸಾರೆ ರಂಜಿಸಲಿದ್ದಾರೆ. ಮಂಜು ಡ್ರಮ್ಸ್ ನ ಖ್ಯಾತ ವಾದ್ಯಗಾರರಾದ ಶ್ರೀ ಮಂಜುನಾಥ ಎಸ್ ಸಹಕಾರ ನೀಡಲಿದ್ದಾರೆ. ಈ ಒಂದು ವಿನೂತನ ಮತ್ತು ಎಂದೂ ಮರೆಯಲಾಗದ ರಸ ಸಂಜೆಗೆ ತಾವೆಲ್ಲರೂ ಬಂದು ಖ್ಯಾತ ಚಲನಚಿತ್ರ ನಿರ್ದೇಶಕರ ಹಾಡುಗಳನ್ನು ಮನಸಾರೆ ಆಸ್ವಾದಿಸಿ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕರಾದ ಮಯೂರ ರಾಘವೇಂದ್ರ. ಹೆಚ್ಚಿನ ವಿವರಗಳಿಗೆ ಹಾಗೂ ಟಿಕೆಟ್ ಬುಕಿಂಗ್ ಆಗಿ ಬುಕ್ ಮೈ ಶೋ ಸಂಪರ್ಕಿಸಬಹುದು.