ಸೂರ್ಯ ಕಲಾವಿದರು ಆಯೋಜಿಸಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ....
ನಗರದ, ಉಲ್ಲಾಳ ಉಪನಗರದಲ್ಲಿ ಸೂರ್ಯ ಕಲಾವಿದರು ಆಯೋಜಿಸಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ರಂಗಭೂಮಿಯ ಪ್ರತಿಭೆಗಳಾದ ಶ್ರೀ. ಮಾಲತೇಶ ಬಡಿಗೇರ ಹಾಗೂ ಶ್ರೀಮತಿ ಛಾಯಾ ಭಾರ್ಗವಿ ದಂಪತಿಗಳಿಗೆ ರಂಗಭೂಮಿಯ ಸೇವೆಗಾಗಿ "ಸೂರ್ಯ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಚಲನಚಿತ್ರ ನಿರ್ದೇಶಕರಾದ ಬಿ. ರಾಮಮೂರ್ತಿ, ಕುವೆಂಪು ಭಾಷಾ ಭಾರತಿ ಸದಸ್ಯರಾದ ಪ್ರೊ. ನಾರಾಯಣ ಘಟ್ಟ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ಪದ ದೇವರಾಜ, ಸೂರ್ಯ ಕಲಾವಿದರ ಅಧ್ಯಕ್ಷರಾದ ಸಂಜಯ ಸೂರಿ, ನಟರಾದ ವಿಕ್ರಮ್ ಸೂರಿ, ನಮಿತ ರಾವ್ ಮತ್ತಿತರರು ಭಗವಿಸಿದ್ದರು, ನಂತರ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ವತಿಯಿಂದ ಕಾಳಿದಾಸನ "ಮೇಘದೂತ ದರ್ಶನಂ" ನಾಟಕ ಪ್ರದರ್ಶನವಾಯಿತು.





Social Plugin