ಫೆಬ್ರವರಿ 11 ರಂದು ಯುವಪಥ ಸಭಾಂಗಣದಲ್ಲಿ BLR 004 ತಂಡದ ವತಿಯಿಂದ ಆಯೊಜಿಸಲಾಗುವ ಕನ್ನಡ ಭಾವಗೀತೆಗಳ ಕಾರ್ಯಕ್ರಮದ ಬಗ್ಗೆ.
ಕನ್ನಡ ನಾಡು, ನುಡಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಒಂದು ಮಾಧ್ಯಮ , ನಮ್ಮ ನಾಡಿನ ಸುಪ್ರಿಸಿದ್ಧ ಕವಿಗಳು ರಚಿಸಿರುವ ಕವನಗಳನ್ನು ಜನಮಾನಸಕ್ಕೆ ತಲುಪಿಸಿರುವ ಕನ್ನಡ ಭಾವಗೇತೆಗಳು. BLR 004 ತಂಡದ ಕಲಾವಿದರು, ಕಳೆದ ಎರಡು ದಶಕಗಳಿಂದ ಸಕ್ರಿಯವಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು , ನಾಡಿನ ಪ್ರತಿಷ್ಠಿತ ವೇದಿಕೆಗಳಲ್ಲಿ , ಹೊರರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ .
ಈ ನಿಟ್ಟಿನಲ್ಲಿ, ಪ್ರತಿಭಾವಂತ ಯುವ ಸಂಗೀತಗಾರರನ್ನೂ ಒಳಗೊಂಡು, BLR 004 ಎಂಬ ಒಂದು ನೂತನ ತಂಡ ಉದ್ಘಾಟನೆಗೊಳ್ಳಲಿದೆ ಮತ್ತು ತಂಡದ ವತಿಯಿಂದ, ನಾಡಿನ ಶ್ರೇಷ್ಠ ಕವಿಗಳ ಭಾವಗೀತೆಗಳನ್ನು ಒಂದು ಹೊಸ ಆಯಾಮದಲ್ಲಿ ಪ್ರಸ್ತುತ ಪಡಿಸಲಾಗುವುದು.
BLR 004 ಎಂಬ ಹೆಸರು, ಬೆಂಗಳೂರು ನಗರದ ಬಸವನಗುಡಿಯ ಪಿನ್ ಕೋಡ್ ನಿಂದ ಪ್ರೇರಣೆಯಾಗಿದೆ. ಕಾರಣ, ಸಾಂಸ್ಕೃತಿಕ ಕ್ಷೇತ್ರದ ಶ್ರೀಮಂತಿಕೆಯನ್ನು ವೃದ್ಧಿಸುವಲ್ಲಿ ಬಸವನಗುಡಿಯ ಪಾತ್ರ ಬಹು ದೊಡ್ಡದು. ಹಾಗೆಯೇ, ತಂಡದ ಎಲ್ಲ ಕಲಾವಿದರು ತಮ್ಮ ವಿದ್ಯಾಭ್ಯಾಸ, ಜೀವನವನ್ನು ರೂಪಿಸಿಕೊಂಡದ್ದು, ಮತ್ತು ಕಲೆ ,ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆತದ್ದು ಬಸವನಗುಡಿಯಿಂದಲೇ ಎಂದರೆ ಅದು ಅತಿಶಯೋಕ್ತಿಯಲ್ಲ.
ದಿನಾಂಕ: ಫ಼ೆಬ್ರವರಿ 11ನೇ ತಾರೀಖು, ಸಮಯ: ಸಂಜೆ 6.30ಕ್ಕೆ
ಸ್ಥಳ:"ಯುವಪಥ- ವಿವೇಕ ಸಭಾಂಗಣ", ವಿಜಯಾ ಕಾಲೇಜಿನ ಹಿಂಭಾಗ, 11ನೇ ಮುಖ್ಯ ರಸ್ತೆ, ಜಯನಗರ ೪ನೇ ಬ್ಲಾಕ್ ಬೆಂಗಳೂರು 560011
ಗಾಯನದಲ್ಲಿ: ಪ್ರವೀಣ್.ಬಿ.ವಿ, ಪ್ರದೀಪ್.ಬಿ.ವಿ, ವರುಣ್ ಪ್ರದೀಪ್
ನಿರೂಪಣೆ: ವಿನಾಯಕ್ ಜೋಶಿ
ಕೀಬೋರ್ಡ್ : ವರುಣ್ ಪ್ರದೀಪ್, ವೇಣುಗೋಪಾಲ್ ವೆಂಕಿ.
ಡ್ರಮ್ಸ್ : ಎನ್.ಎಸ್. ಮಂಜುನಾಥ್
ತಬಲ: ಪ್ರದ್ಯುಮ್ನ ಸೊರಬ, ಅಮಿತ್ ರಾಜ್
ರಿದಂ ಪ್ಯಾಡ್: ಕೃಷ್ಣ ಆನಂದ್, ಶಿವಸಾಗರ್.
ಕೊಳಲು ಮತ್ತು ಸ್ಯಾಕ್ಸೋಫೋನ್: ಭರತ್ ಆತ್ರೇಯಸ್
ಗಿಟಾರ್: ರೊನಾಲ್ಡ್ ಕೋಟ್ಸ್
ಢೋಲಕ್ ಮತ್ತು ವಿಶೇಶ ಲಯವಾದ್ಯದಲ್ಲಿ : ಕಾರ್ತಿಕ್ ಪಾಂಡವಪುರ
ಸಹಗಾಯನದಲ್ಲಿ : ಜಾಹ್ನವಿ ನಾಗಕಿರಣ್, ಪ್ರಕೃತಿ, ಶ್ವೇತಾ ಭಾರದ್ವಾಜ್, ಸೌಜನ್ಯ ಪಂಡಿತ್
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸುಪ್ರಸಿದ್ಧ ಬರಹಗಾರು ಮತ್ತು ಶಿಕ್ಷಣ ಕ್ಷೇತ್ರದ ದಿಗ್ಗಜರಾದ ಪ್ರೊ. ಕೆ. ಇ. ರಾಧಾಕೃಷ್ಣ, ಸುಪ್ರಸಿದ್ಧ ರಂಗಕರ್ಮಿ ಮತ್ತು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ. ಟಿ.ಎಸ್. ನಾಗಾಭರಣ, ಸುಪ್ರಿಸಿದ್ಧ ನಟರು ಮತ್ತು ನಿರ್ದೇಶಕರಾದ ಶ್ರೀ ಸಿಹಿಕಹಿ ಚಂದ್ರು, ಶ್ರೀ ವೈ.ಕೆ. ಮುದ್ದುಕೃಷ್ಣ, ಹಿರಿಯ ಗಾಯಕರು ಮತ್ತು ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಲಹರಿ ಕಂಪನಿಯ ಮಾಲೀಕರಾದ ಶ್ರೀ ಲಹರಿ ವೇಲು ಮತ್ತು ಇನ್ನಿತರ ಸಂಗೀತ, ಚಲನಚಿತ್ರ ಮತ್ತು ರಂಗ ಭೂಮಿಯ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದ ಇಂಡಿಯಾ ಸ್ವೀಟ್ ಹೌಸ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವು ಆಯೋಜನಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಸರ್ವರಿಗೂ ಆತ್ಮೀಯ ಸ್ವಾಗತ.
ಪ್ರವೀಣ್ .ಬಿ.ವಿ- ಪ್ರದೀಪ್.ಬಿ.ವಿ
ಗಾಯಕರು, ಸಂಗೀತ ನಿರ್ದೇಶಕರು, ಬೆಂಗಳೂರು.
+91 9886333457, praveenbvrao@gmail.com
+91 9886054000, pradip.bv@gmail.com