ಧನಂಜನ್ ರಂಜನ್ ಸಾಹಿತ್ಯದ ಛಂದಸ್ಸಿನ ಚೆಂದದಲ್ಲಿ ಎಂಬ ಪ್ರೇಮಗೀತೆ ಎ2 ಮ್ಯೂಸಿಕ್ ನಲ್ಲಿ ಅನಾವರಣಗೊಂಡಿದೆ. ಸಿದ್ದಾರ್ಥ್ ಬೆಳ್ಮಣ್ಣು ಹಾಗೂ ಮೇಘನಾ ಭಟ್ ಕಂಠಸಿರಿಯಲ್ಲಿ ಹಾಡು ಮೋಹಕವಾಗಿ ಮೂಡಿಬಂದಿದೆ. ಚರಣ್ ರಾಜ್ಯ ಸಂಗೀತ, ಶಿವ ಸೇನಾ ಛಾಯಾಗ್ರಹಣ ಛಂದಸ್ಸಿನ ಚೆಂದವಳ್ಳಿ ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ಈ ಹಾಡಿನಲ್ಲಿ ನಾಯಕ ಶ್ರೇಷ್ಠ ಹಾಗೂ ನಾಯಕಿ ನಿವಿಷ್ಕಾ ಪಾಟೀಲ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಮೆಲುವಾದ ಸಾಹಿತ್ಯ, ಸಂಗೀತದ ಮಿಳಿತದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿದೆ.ಸಲಗ ಸಿನಿಮಾದಲ್ಲಿ ‘ಕೆಂಡ’ ಪಾತ್ರದಲ್ಲಿ ಮಿಂಚಿದ್ದ ಶ್ರೇಷ್ಠ ಈ ಸಿನಿಮಾದಲ್ಲಿ ನಾಯಕನಾಗಿದ್ದಾನೆ. ಬೆಳಗಾವಿ ಚೆಲುವೆ ನಿವಿಷ್ಕಾ ಪಾಟೀಲ್ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪಾಪಾ ಪಾಂಡು ಖ್ಯಾತಿಯ ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವೈದ್ಯಕೀಯ ಹಿನ್ನೆಲೆಯುಳ್ಳ ಕ್ರಿಸ್ಟೋಪರ್ ಕಿಣಿ ಚಿತ್ರಕ್ಕೆ ಶಕ್ತಿಯಾಗಿ ನಿಂತಿದ್ದಾರೆ. ಸೋಮು ಸೌಂಡ್ ಇಂಜಿನಿಯರ್ ಹಿಂದೆ ಒಳ್ಳೆ ಟೆಕ್ನಿಷನ್ಗಳ ತಂಡವೇ ಇದೆ. ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಮಾಸ್ತಿ ಡೈಲಾಗ್ ಬರೆದುಕೊಟ್ಟಿದ್ದಾರೆ. ದೀಪು ಎಸ್.ಕುಮಾರ್ ಸಂಕಲನ ಮಾಡಿದ್ದಾರೆ.
'ಸೋಮು ಸೌಂಡ್ ಇಂಜಿನಿಯರ್’ ಪಕ್ಕಾ ಹಳ್ಳಿ ಕಥೆ. ಅದರಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಇಳಕಲ್, ಗಂಜಿಹಾಳ, ಕೂಡಲ ಸಂಗಮಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಭಾಷೆ, ಉತ್ತರ ಕರ್ನಾಟಕದ ಜವಾರಿ ಸಂಗೀತ, ಸ್ಥಳೀಯ ಹಾಡುಗಳು ಜತೆಗೆ ಸ್ಥಳೀಯರನ್ನೇ ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ಸೆನ್ಸಾರ್ ಪಾಸಾಗಿರುವ ಸೋಮು ಮಾರ್ಚ್ 15ಕ್ಕೆ ತೆರೆಗೆಯಲ್ಲಿ ಸೌಂಡ್ ಮಾಡಲಿದ್ದಾನೆ.

Social Plugin