೧೫ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ “ಗೌರವ ಮತ್ತು ಸ್ಮರಣೆ” ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮದನ್ ಪಟೇಲ್ ರವರ ತಮಟೆ ಕಾದಂಬರಿ ಆಧಾರಿತ “ತಮಟೆ” ಕನ್ನಡ ಚಲನಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.ಮೀಡಿಯಾ ಇಂಟರ್‌ನ್ಯಾಷನಲ್ ಅರ್ಪಿಸಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿ ಕ್ರಿಯೇಷನ್ಸ್ ನ ಎಂ. ವಂದನಾರವರು ನಿರ್ಮಾಣ ಮಾಡಿದ್ದಾರೆ..
ತಮಟೆ ಚಲನಚಿತ್ರವನ್ನು ಮಯೂರ್ ಪಟೇಲ್ ನಿರ್ದೇಶಿಸಿದ್ದಾರೆ.
ತಾರಾಗಣದಲ್ಲಿ ಬಡ ದಲಿತ ತಮಟೆ ವಾದ್ಯಗಾರನ ಪಾತ್ರವನ್ನು ಮದನ್ ಪಟೇಲ್‌ರವರು ನಿರ್ವಹಿಸಿದ್ದು, ಶ್ರೀಮತಿ. ಸುಂದರ ಗುಬ್ಬಿ, ವಿನಯಾ ಪ್ರಸಾದ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ವಾಣಿಶ್ರೀ, ರಮೇಶ್ ಪಂಡಿತ್, ಚಂದು ಗೌಡ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪ್ರಾತ್ರಧಾರಿಯಾಗಿರುತ್ತಾರೆ. ವೆಸ್ಲಿ ಬ್ರೌನ್ ಛಾಯಾಗ್ರಹಣ, ಗುರುರಾಜ್ ಸಂಕಲನ, ಮದನ್ ಪಟೇಲ್ ಸಂಗೀತ ನಿರ್ದೇಶನ "ತಮಟೆ" ಚಿತ್ರಕ್ಕಿದೆ.
ಈ ಚಿತ್ರವು ದಸರಾ ಚಿತ್ರೋತ್ಸವ ಅಲ್ಲದೆ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಚಿತ್ರರಂಗದ ಗಣ್ಯರ ಮತ್ತು ಚಿತ್ರ ವಿಮರ್ಶಕರ ಮೆಚ್ಚುಗೆ ಪಡೆದಿದೆ.
ಬಡ ದಲಿತ ತಮಟೆ ವಾದ್ಯಗಾರ ಮುನಿಯ ಒಂದು ರಾಜಕೀಯ ಸಭೆಗೆ ತನ್ನ ತಂಡದೊಂದಿಗೆ ತಮಟೆ ನುಡಿಸಲು ಹೋಗಿದ್ದಾಗ, ರಾಜಕೀಯ ಕುತಂತ್ರದಿಂದ ಆತನ ತಮಟೆ ವಾದ್ಯವನ್ನು ಪೊಲೀಸರು ಜಪ್ತಿ ಮಾಡುತ್ತಾರೆ. ಅಮಾಯಕನಾದ ತಮಟೆ ಮುನಿಯ ತನ್ನ ಜೀವದ ಜೀವವಾಗಿದ್ದ ತಮಟೆಯನ್ನು ಮರಳಿ ಪಡೆಯಲು ಪಡುವ ಪರಿಪಾಟಲು, ಸಮಾಜ ಘಾತುಕರ ಕುಟಿಲತೆ, ರಾಜಕೀಯ ನಾಯಕರ ಸ್ವಾರ್ಥದಿಂದಾಗಿ ತನ್ನ ತಮಟೆಯನ್ನು ಪಡೆಯುವ ನಿಟ್ಟಿನಲ್ಲಿ ಆತನ ಅನುಭವಿಸುವ ನೋವುಗಳನ್ನ ಅತ್ಯುತ್ತಮವಾಗಿ ನಿರ್ದೇಸಕರು ಚಿತ್ರಿಕರಿಸಿದ್ದಾರೆ.

Social Plugin