ಸಂಗೀತಧಾಮ ಹಾಗು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ಸಂಗೀತಧಾಮ-20 ಕಾರ್ಯಕ್ರಮವು ದಿ.18 ರಂದು ಬೆಂಗಳೂರಿನ ನೆಹರು ಗಾಂಧಿ ಸಂಭಾಗಣದಲ್ಲಿ ಜರುಗಲಿದ್ದು, ಪ್ರಶಸ್ತಿ ಪುರಸ್ಕ್ರತರಾದ ಪೂಜಾರಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಹೆಸರಾಂತ ಸಂಗೀತಗಾರರಾದ ವೆಂಕಟೇಶ ಗೋಡ್ಕಿಂಡಿ, ಡಾ.ಸಿ. ಅಶ್ವಥ್, ಬಿ.ಕೆ. ಸುಮಿತ್ರ, ಶಿವಮೊಗ್ಗ ಸುಬ್ಬಣ್ಣ ಹಾಗು ನಾಡೋಜ ಚನ್ನವೀರ ಕಣವಿ, ರಾಷ್ಟçಕವಿ ಜಿ.ಎಸ್.ಎಸ್. ಸಾ.ಶಿ. ಮರುಳಯ್ಯ, ಲಕ್ಷ್ಮೀ ನಾರಾಯಣ ಭಟ್ಟ, ಹೆಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್.ಎಲ್., ಎಸ್.ಜಿ. ಸಿದ್ದಲಿಂಗಯ್ಯ, ಕೆ.ಎಸ್. ನಿಸಾರ ಅಹ್ಮದ್ ಹೀಗೆ ಅನೇಕ ಶ್ರೇಷ್ಠರಿಗೆ `ಸಾಹಿತ್ಯ ಕಲಾ ಕೌಸ್ತುಭ’ ಪ್ರಶಸ್ತಿ ನೀಡುವದರ ಜೊತೆಗೆ ಈ ಬಾರಿ ಬಾಗಲಕೋಟೆ ಜಿಲ್ಲೆಯ *ರಬಕವಿ-ಬನಹಟ್ಟಿ* ಯ ಸಾಹಿತಿ *ಸಿದ್ಧರಾಜ ಪೂಜಾರಿ* ಯವರಿಗೆ ದೊರೆತಿರುವದು ವಿಶೇಷ.

Social Plugin