ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ 19-20-21 ಹಾಗೂ ಆಕ್ಟ್-1978 ಸಿನಿಮಾ ‘Bcineet’ನಲ್ಲಿ ಸ್ಟ್ರೀಮಿಂಗ್.
ಇಂದಿನಿಂದ ‘Bcineet’ನಲ್ಲಿ 19-20-21 ಹಾಗೂ ಆಕ್ಟ್-1978 ಸಿನಿಮಾ ಸ್ಟ್ರೀಮಿಂಗ್.. ಅಂಗೈಯಲ್ಲಿ ನೋಡಿ ಮಂಸೋರೆ ಡೈರೆಕ್ಷನ್ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳನ್ನು ಪ್ರೇಕ್ಷಕರ ಎದುರು ಪ್ರಸ್ತುತಪಡಿಸುವಲ್ಲಿ ಪ್ರಮುಖ ಸಾಲಿನಲ್ಲಿ ನಿಲ್ಲುವ ನಿರ್ದೇಶಕರ ಪೈಕಿ ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮದೆ ಆದ ವಿಭಿನ್ನ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುತ್ತ ಬಂದಿರುವ ನಿರ್ದೇಶಕ ಮಂಸೋರೆ ಸಾರಥ್ಯದ 19-20-21 ಹಾಗೂ ಆಕ್ಟ್-1978 ಚಿತ್ರಗಳು ‘Bcineet’ ಒಟಿಟಿಯಲ್ಲಿ ಇಂದಿನಿಂದ ಸ್ಟ್ರೀಮಿಂಗ್ ಆಗ್ತಿದೆ.
ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆ ‘19.20.21'. ಒಬ್ಬ ಅಮಾಯಾಕ ಮತ್ತು ಅವನ ಕುಟುಂಬವನ್ನು ಒಂದು ದಶಕಕ್ಕೂ ಹೆಚ್ಚು ಕಾಲ ವ್ಯವಸ್ಥೆಯೂ ಹಿಂಸಿಸಿದ ಕಥೆಯನ್ನು ಮಂಸೋರೆ ಪ್ರೇಕ್ಷಕರ ಮನಸ್ಸಿಗಿಳಿಸಿದ್ದರು. ರಂಗಭೂಮಿ ಕಲಾವಿದರರಾದ ಶೃಂಗ ಬಿ ವಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ‘19.20.21’ ಚಿತ್ರವನ್ನು ಸಹ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಕೂಡ ಈಗ ‘Bcineet’ ಸ್ಟ್ರೀಮಿಂಗ್ ಆಗಿದೆ.
ಭ್ರಷ್ಟ ವ್ಯವಸ್ಥೆಯಿಂದ ರೋಸಿಹೋಗುವ ಏಕಾಂಗಿ ಮಹಿಳೆ ತನ್ನ ಹಕ್ಕು ಪಡೆದುಕೊಳ್ಳಲು ಅಂತಿಮವಾಗಿ ಹಿಂಸೆಯ ದಾರಿ ಹಿಡಿದು ತನ್ನನ್ನೇ ಬಲಿಕೊಟ್ಟುಕೊಳ್ಳುವ ಮೂಲಕ ಭ್ರಷ್ಟರ ಕಣ್ಣುತೆರೆಸಲು ಕಾರಣವಾಗುತ್ತಾಳೆ ಎಂಬುದು ಆಕ್ಟ್-1978 ಸಿನಿಮಾದ ಕತೆ. ಯಜ್ಞಾ ಶೆಟ್ಟಿ, ಬಿ ಸುರೇಶ್, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಪ್ರಮೋದ್ ಶೆಟ್ಟಿ, ಸುಧಾ ಬೆಳವಾಡಿ ಇನ್ನೂ ಹಲವರು ನಟಿಸಿರುವ ಈ ಸಿನಿಮಾವನ್ನು ಮಂಸೋರೆ ನಿರ್ದೇಶಿಸಿದ್ದು, ದೇವರಾಜ್ ಆರ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವೀಗ ‘Bcineet’ ಬಿಡುಗಡೆಯಾಗಿದೆ.
Social Plugin