ವಿಕ್ರಂ ಸೂರಿ ಹಾಗೂ ನಮಿತಾ ರಾವ್ ಕಲಾ ದಂಪತಿಗಳಿಂದ ಅಮೆರಿಕಾದಲ್ಲಿ ಕನ್ನಡದ ಕಲರವ.ವಿಕ್ರಂ ಸೂರಿ ಹಾಗೂ ನಮಿತ ರಾವ್ ಕಲಾ ದಂಪತಿಗಳು ಸತತ 3 ತಿಂಗಳಿಂದ ಅಮೇರಿಕಾದ ಹಲವು ಕನ್ನಡ ಸಂಘಗಳ ಜೊತೆ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡೆಸಿದರು. ಬಾಸ್ಟೊನ್ ಕನ್ನಡ ಸಂಘದ ಜೊತೆಗೆ ನೃತ್ಯ ಕಾರ್ಯಕ್ರಮ, Atlanta ದಲ್ಲಿ ನೃಪತುಂಗ ಕನ್ನಡ ಕೂಟದ 50ನೇ ವಾರ್ಷಿಕೋತ್ಸವದ ಅಂಗವಾಗಿ ರಂಗಗೀತೆ, ಹಾಸ್ಯ ನಾಟಕ, ಗೀತ ರೂಪಕ ಪ್ರಸ್ತುತ ಪಡೆಸಲಾಯಿತು, ಮಿನಿಸೋಟ ಕನ್ನಡ ಸಂಘದಲ್ಲಿ ನೃತ್ಯ, ರಿಚ್ಮೊಂಡ್ ಕನ್ನಡ ಸಂಘ ಹಾಗೂ ಚಿಕಾಗೋ ದ ವಿದ್ಯಾರಣ್ಯ ಕನ್ನಡ ಕೂಟಾದಲ್ಲಿ ಹಾಸ್ಯ ನಾಟಕ "ಲಾಕ್ಔಟ್ ಅಲ್ಲ ನಾಕ್ಔಟ್" ಮತ್ತು ಗೀತ ರೂಪಕ "ಪುಣ್ಯಕೋಟಿ" ಪ್ರಸ್ತುತ ಪಡೆಸಲಾಯಿತು.ಸೂರ್ಯ ಕಲಾವಿದರ ಈ ಕಲಾ ಪಯಣದಲ್ಲಿ ಒಟ್ಟಾರೆಯಾಗಿ "ಪುಣ್ಯಕೋಟಿ" ಗೀತರೂಪಕ ಜನಮನದಲ್ಲಿ ಅಚ್ಚಳಿಯದ ಹಾಗೆ ಉಳಿಯಿತು.
ಹಿಂದಿನ, ಇಂದಿನ ಹಾಗೂ ಮುಂದಿನ ಅನಿವಾಸಿ ಕನ್ನಡಿಗರ ತಲೆಮಾರಿನಲ್ಲಿ. ನಮ್ಮ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಈ ಕಲಾ ದಂಪತಿಗಳು ಮುಂದಾಗಿರುವುದು ಶ್ಲಾಘನೀಯ.