ಕ್ರಿಕೆಟ್ ಹುಟ್ಟಿನ ಬಗ್ಗೆ Jesuna GS Narayana Rao ಅವರ ಬರಹ ಕೆಳಗಿನ ಸಾಲುಗಳಲ್ಲಿದೆ ಓದಿ 🙏
ಕ್ರಿಕೆಟ್ ಕಲ್ಪನೆ ಹುಟ್ಟಿದ್ದೇ ಬ್ರಿಟನ್ನಿನ ಕುರಿಗಾಹಿಗಳ ನಡುವೆ ! ಕುರಿಗಳನ್ನು ಮೇಯಿಸಲು ಹುಲ್ಲುಗಾವಲಿಗೆ ಹೋಗುತ್ತಿದ್ದ ಹುಡುಗರು ಸಮಯ ಕಳೆಯಲು ಯಾವುದಾದರೂ ಒಂದು ಆಟದಲ್ಲಿ ತೊಡಗಿಕೊಳ್ಳಬೇಕಿತ್ತು . ಅಂಥ ಸಮಯದಲ್ಲಿ ಅಚಾನಕ್ಕಾಗಿ ಹೊಳೆದದ್ದು ಒಂದು ಕೋಲು ಮತ್ತು ಚೆಂಡಿನಂಥ ವಸ್ತುವಿನೊಡನೆ ಆಟ ಆಡುವುದು .
ಕುರಿಗಳನ್ನು ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟ ಹುಡುಗರು ಬಟ್ಟೆಯನ್ನು ಚೆಂಡಿನ ಆಕಾರದಲ್ಲಿ ಗುಂಡಗೆ ಸುತ್ತಿ ಕೋಲಿನಿಂದ. ಅದನ್ಮು ಹೊಡೆಯುವ ಮನರಂಜನೆಯ ಆಟ ಆರಂಭಿಸಿದರು . ಹೀಗೆ ಆರಂಭಗೊಂಡ ಹೆಸರೇ ಇಲ್ಲದ ಆಟ ಕ್ರಮೇಣ ಹಲವು ಸ್ಥಿತ್ಯಂತರಗಳಿಗೆ ಒಡ್ಡಿಕೊಳ್ಳುತ್ತಾ ಈಗಿನ ಸ್ವರೂಪಕ್ಕೆ ಬಂದು ನಿಂತಿದೆ .
ನಮ್ಮನ್ನು ಗುಲಾಮರನ್ನಾಗಿಸಿ ಆಳಿದ ಬ್ರಿಟನ್ ಮಹಾ ಪ್ರಭುಗಳು ಕ್ರಿಕೆಟ್ ಎಂಬ ಅಫೀಮಿನ ಕಷಾಯವನ್ನು ಅಳತೆಮೀರಿ ನಮಗೆ ಕುಡಿಸಿ ಇಲ್ಲಿಂದ ನಿರ್ಗಮಿಸಿದರು . ಅಂಗೈ ಅಗಲದ ಬ್ರಿಟನ್ ಎಂಬ ದೇಶದ ಮಹಾ ಪ್ರಭುಗಳು ತಮ್ಮ ವಸಾಹತು ದೇಶಗಳ ಜಲಮೂಲಗಳಿಗೂ ಇದೇ ಅಫೀಮನ್ನು ಟನ್ನುಗಟ್ಟಲೆ ಸುರಿದೇ ನಡೆದುಬಿಟ್ಟರು . ಹೀಗಾಗಿ ಕ್ರಿಕೆಟ್ ಈಗ ಜಗತ್ತಿನ ಸುಮಾರು ಆರೇಳು ದೇಶಗಳಲ್ಲಿ ಮಾತ್ರ ಇದು ಇನ್ನೂ ಉಸಿರಾಡಿಕೊಂಡು , ದಿನದಿಂದ ದಿನಕ್ಕೆ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟಿನ ವಾಣಿಜ್ಯ ರೂಪ ಪಡೆದುಕೊಂಡಿದೆ .
ಭಾರತ - ಪಾಕೀಸ್ತಾನ ಆಟದ ಅಂಗಳಕ್ಕೆ ಇಳಿದಾಗ ಧರ್ಮವನ್ನು ಆವಾಹಿಸಿಕೊಂಡು ಯುದ್ಧೋಪಾದಿಯಲ್ಲಿ ವೀಕ್ಷಕರು ಚೀರಾಡತೊಡಗುತ್ತಾರೆ . ಅದೇ ಬೇರೆ ದೇಶಗಳ ನಡುವೆ ಕೇವಲ ಮನರಂಜನೆಯ ಆಟವಾಗಿಯೇ ನಡೆದು ವೀಕ್ಷಕರನ್ನು ರಂಜಿಸುತ್ತದೆ .
ಇಂದಿನ ಆಟ ವೀಕ್ಷಿಸಲು ಇದಿಷ್ಟು ಕಷಾಯ ಸಾಕೆನಿಸುತ್ತದೆ .
ಭಾರತ್ ಮಹಾನ್. ಜೈ ಹಿಂದ್
*****

Social Plugin