ಇಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಶ್ರೀ ಎನ್. ಎಂ. ಸುರೇಶ್‌ರವರ ಅಧ್ಯಕ್ಷತೆಯಲ್ಲಿ “ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕರಾದ ಶ್ರೀ ಉಮೇಶ್ ಬಣಕಾರ್‌ರವರು ಉಪಾಧ್ಯಕ್ಷರಾದ ಎಂ.ಜಿ.ರಾಮಮೂರ್ತಿರವರು, ಗೌರವ ಕಾರ್ಯದರ್ಶಿಯಾದ ಶ್ರೀ ಡಿ.ಕೆ.ರಾಮಕೃಷ್ಣರವರು, ಜಂಟಿ ಕಾರ್ಯದರ್ಶಿಗಳಾದ ಶ್ರೀ ರಮೇಶ್ ಯಾದವ್‌ರವರು, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಹೆಚ್.ಸಿ.ಶ್ರೀನಿವಾಸ್(ಶಿಲ್ಪ), ಶ್ರೀ ಪಿ.ವಿ.ಎಸ್.ಗುರುಪಸಾದ್‌, ಶ್ರೀ ಟೇಶಿ ವೆಂಕಟೇಶ್, ಶ್ರೀ ಆಂತರ್ಯ ಸತೀಶ್, ಶೀಮತಿ ಪಿಯಾ ಹಾಸನ್ ಹಾಗೂ ನಿರ್ಮಾಪಕ ಸದಸ್ಯರು ಹಾಜರಿದ್ದರು.