ಅಟ್ಲಾಂಟದ ನೃಪತುಂಗ ಕನ್ನಡ ಕೂಟವು ಇತ್ತೀಚೆಗೆ ತನ್ನ 50ನೇ ವಾರ್ಷಿಕೋತ್ಸವ ಆಚರಿಸಿತು. ನಟರಾದ ಸಿಹಿ ಕಹಿ ಚಂದ್ರು, ಶ್ರೀನಾಥ್ ವಶಿಷ್ಠ, ನಮಿತಾ ರಾವ್, ವಿಕ್ರಮ್ ಸೂರಿ ಹಾಗೂ ನೃತ್ಯಗಾರರಾದ ನಿರುಪಮಾ, ರಾಜೇಂದ್ರ ಮತ್ತು ಯಕ್ಷಗಾನ ಕಲಾವಿದರಾದ ನವೀನ್,ಆದಿತ್ಯ, ಜಾದೂಗಾರ ಆಶಿಕ್ ಪ್ರಕಾಶ್ ಅವರು ವೈವಿಧ್ಯಮಯ ಕಾರ್ಯಕ್ರಮಗಳಿಂದ ರಂಜಿಸಿದರು. 
ವಿಕ್ರಮ್ ಸೂರಿ ಹಾಗು ನಮಿತ ರಾವ್ ಪ್ರಸ್ತುತ ಪಡಿಸಿದ ಹಾಸ್ಯ ನಾಟಕ "ಲಾಕೌಟ್ ಅಲ್ಲ ನಾಕೌಟ್" ಜನರನ್ನು ಹಾಸ್ಯಗಡಲ್ಲಿ ತೇಲಿಸಿ, "ಪುಣ್ಯ ಕೋಟಿ" ಗೀತ ರೂಪಕ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿ ಮಾಡಿ ರಂಗಗೀತೆಗಳೊಂದಿಗೆ ಜನರನ್ನು ಆಕರ್ಷಿಸಿದರು. 
ಅಟ್ಲಾಂಟದ ಸ್ಥಳೀಯ ಕಲಾವಿದರಿಂದ ನೃತ್ಯ, ಜಾನಪದ ಗಾಯನ ಹಾಗೂ ಚಿಣ್ಣರಿಂದ ಕನ್ನಡದ ದೇಶ ಭಕ್ತಿ ಗಾಯನ ಪ್ರಸ್ತುತ ಪಡಿಸಲಾಯಿತು.
ಎರಡು ದಿನವೂ ಕನ್ನಡಿಗರಿಗೆ ರುಚಿಕರವಾದ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು ಹಾಗೆಯೇ "ಚಿಗುರು" ಸ್ಮರಣ ಸಂಚಿಕೆಯ ಪ್ರಕಟಣೆಯನ್ನು ಬಿಡುಗಡೆ ಮಾಡಲಾಯಿತು ವಿಶೇಷವಾಗಿ ಸಿಂಗರಿಸಿದ್ದ ಕನ್ನಡ ರಥವನ್ನು ಕೊಡಗು, ಕಲ್ಯಾಣ ಕರ್ನಾಟಕ, ಬಯಲುಸೀಮೆ ಮತ್ತು ಕರಾವಳಿ ಶೈಲಿಯ ವೇಷಭೂಷಣ ಧರಿಸಿದ್ದ ಕನ್ನಡಿಗರು ತಮಟೆ, ಕಂಸಾಳೆ ವಾದ್ಯ, ವೀರಗಾಸೆ ನೃತ್ಯದ ಮೂಲಕ ಮೆರವಣಿಗೆ ಮಾಡಿದರು. ಸಂಘದ ಪ್ರಸ್ತುತ ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಶ್ರೀ. ಸಂತೋಷ್ ಕೃಷ್ಣಮೂರ್ತಿ, ಶ್ರೀಮತಿ. ಮಂಗಳ ಉಡುಪ ಹಾಗೂ ಟ್ರಷ್ಟಿಗಳು, ಮಂಡಳಿಯ ನಿರ್ದೇಶಕರು, ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಶ್ರೀ. ಶ್ರೀನಿವಾಸ್ ಪ್ರಸಾದ್ ಹಾಗೂ ಪದಾದಿಕಾರಿಗಳು ಉಪಸ್ತಿತ ರಿದ್ದರು. 1973 ರಲ್ಲಿ ಸ್ಥಾಪಿತವಾದ ಅಟ್ಲಾಂಟ ನೃಪತುಂಗ ಕನ್ನಡ ಕೂಟವು ಯಶಸ್ವಿಯಾಗಿ 50 ವರ್ಷ ಪೂರೈಸಿ ಜಾರ್ಜಿಯಾ ರಾಜ್ಯದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಸ್ಥಳೀಯ ಅನಿವಾಸಿ ಕನ್ನಡಿಗರ ಕೊಂಡಿಯಾಗಿದೆ. ಈ ಸಂದರ್ಭದಲ್ಲಿ 2022ರಲ್ಲಿ ನಿಧನರಾದ ಸ್ಥಾಪಕರಾದ ಶ್ರೀ. ಹೊನ್ನವಳ್ಳಿ ರಾಮಸ್ವಾಮಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.