USA ಯಲ್ಲಿ ಕಲಾ ದಂಪತಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಭಿನಯ, ನಟನೆ ಹಾಗೂ ರಂಗಗೀತೆಗಳ ತರಬೇತಿ...
ಕಲಾ ದಂಪತಿಗಳಾದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಅವರು ಅಮೇರಿಕಾದ ಬಾಸ್ಟನ್ ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸುಮಾರು 600ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದರು.ಇನ್ನು ಎರಡು ತಿಂಗಳ ಕಾಲ ಅಮೇರಿಕಾದಲ್ಲಿ ನೆಲಸಿರುವ ಸ್ಥಳೀಯ ಕನ್ನಡದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅಭಿನಯ, ನಟನೆ ಹಾಗೂ ರಂಗಗೀತೆಗಳ ತರಬೇತಿಯನ್ನು ನೀಡಲಾಗುತ್ತದೆ. ಅಮೇರಿಕಾದ ಹಲವು ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳಲಾಗಿದ್ದು, ದಸರಾ, ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.