ಸುಮಾರು ಹತ್ತು ವರ್ಷ ಆಗಿರಬಹುದು ಸರಿಯಾಗಿ ನೆನಪಿಲ್ಲ, ಕಿತ್ತೂರು ಉತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ನಿಜಗುಣಾನಂದ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಮಾತನಾಡುತ್ತ ತಾಯಿ ಚೆನ್ನಮ್ಮಾಜಿಯ ಉತ್ಸವ ಅರ್ಥಪೂರ್ಣವಾಗಬೇಕಾರೆ, ವಿಜಯೋತ್ಸವಕ್ಕೆ ಮತ್ತಷ್ಟು ಮೆರಗು ಬರಬೇಕು ಅಂದ್ರೆ ಮೊಟ್ಟ ಮೊದಲನೆಯದಾಗಿ ಉತ್ಸವದಲ್ಲಿ ಸಾರಾಯಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಸಲಹೆ ನೀಡುತ್ತಾರೆ.
ಪೂಜ್ಯರ ಸಲಹೆಯನ್ನು ಪರಿಗಣಿಸಿ ಬೆಳಗಾವಿ ಜಿಲ್ಲಾಡಳಿತವು ಮಾರನೇಯ ವರ್ಷದಿಂದ ಈವರೆಗೂ ಮೂರು ದಿನಗಳ ಕಾಲ ಸಾರಾಯಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಿ ಉತ್ಸವವನ್ನು ಆಚರಿಸುತ್ತ ಬರುತ್ತಿದೆ ಎಂದು ತಿಳಿಸಲು ಹರ್ಷವೆನಿಸುತ್ತದೆ.
ಕಿತ್ತೂರು ಉತ್ಸವ ಸಾರಾಯಿ ಮುಕ್ತ ಉತ್ಸವವಾಗಿ ಆಚರಣೆಗೊಳ್ಳಲು ಕಾರಣರಾದ ಪೂಜ್ಯ ನಿಜಗುಣಾನಂದ ಶ್ರೀಗಳಿಗೆ ಕಿತ್ತೂರು ನಾಡಿನ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.