ಕಿರುತೆರೆ ಲೋಕದಲ್ಲಿ ಹಲವಾರು ಸೃಜನಾತ್ಮಕ ಕಾರ್ಯಕ್ರಮಗಳನ್ನು ನೀಡಿ ಕನ್ನಡಿಗರ ಮನದಲ್ಲಿ ಭದ್ರವಾದ ಸ್ಥಾನಗಳಿಸಿರುವ "ಸಿರಿಕನ್ನಡ" ವಾಹಿನಿ ಮತ್ತೊಂದು ಮೆಗಾ ಧಾರಾವಾಹಿಯೊಂದಿಗೆ ವೀಕ್ಷಕರಿಗೆ ಕನ್ನಡ ರಾಜ್ಯೋತ್ಸವದ ಉಡುಗೊರೆ ನೀಡಲು ಮುಂದಾಗಿದೆ.
ಇದೇ ಅಕ್ಟೋಬರ್ 30 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ *ಅಮೃತಘಳಿಗೆ* ಹೊಸ ಮೆಗಾ ಧಾರಾವಾಹಿ ಆರಂಭವಾಗಲಿದೆ.ಕಿರುತೆರೆಯ ಖ್ಯಾತ ನಿರ್ದೇಶಕ, ಬರಹಗಾರ ರವಿ ಆರ್ ಗರಣಿಯವರ ಸಾರಥ್ಯದಲ್ಲಿ ಈ ಧಾರಾವಾಹಿಯ ಕಥೆ ಮೂಡಿಬರುತಿದ್ದು, ಹೆಸರಾಂತ ನಿರ್ದೇಶಕರಾದ ಭಾರತೀಶ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯ ಖ್ಯಾತ ಕಲಾವಿದರೊಂದಿಗೆ ಹೊಸ ಕಲಾವಿದರ ಸಂಗಮವಿರುವ ಈ ಧಾರಾವಾಹಿ ವೀಕ್ಷಕರ ಮನ ಮುಟ್ಟುವಂತಿದೆ.
ಈ ಧಾರಾವಾಹಿಯಲ್ಲಿ ನಾಯಕಿ ಪಾತ್ರ ತುಂಬಾ ವಿಶಿಷ್ಟವಾಗಿದೆ. ಎರಡು ವಿಭಿನ್ನ ನೆಲೆಯ ಕೌಟುಂಬಿಕ ಸಂಘರ್ಷದ ಕಥೆಯಲ್ಲಿನ ತಿರುವುಗಳು ಈ ಮೆಗಾ ಧಾರಾವಾಹಿಗೆ ಹೊಸ ರೂಪ ನೀಡುತ್ತದೆ. ಕೇವಲ ರಿಮೇಕ್ ಮತ್ತು ಅದ್ದೂರಿತನದಲ್ಲೆ ಕಳೆದು ಹೋಗಿರುವ ಧಾರಾವಾಹಿ ಪ್ರಪಂಚಕ್ಕೆ ಕಥೆಯನ್ನೇ ಮೂಲವಾಗಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿರೋ *ಅಮೃತಘಳಿಗೆ* ಧಾರಾವಾಹಿಗೆ ನೋಡುಗರ ಪ್ರೋತ್ಸಾಹ ಅತ್ಯಗತ್ಯ ಎಂಬುದು ಸಿರಿಕನ್ನಡ ವಾಹಿನಿಯ ಅಭಿಪ್ರಾಯ.
Social Plugin