( ಭಗವಂತ ಖೂಬಾ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ
------------
ಲಿಂಗಸುಗೂರು 22: ಜೀವ ಸೃಷ್ಟಿಯ ಹುಟ್ಟು ಆಕಸ್ಮಿಕವಾದರೂ ಸಾವು ಖಚಿತವಾಗಿದೆ, ಹುಟ್ಟು-ಸಾವು ನಡುವಣ ಬದುಕು ಶಿವಕೃಪೆಯಿಂದಲೇ ಭವ ಗೆಲ್ಲಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಭಾನುವಾರ ಬೆಳಗ್ಗೆ ಪಟ್ಟಣದ ಈಶ್ವರ ದೇವಸ್ಥಾನದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಧರ್ಮ ಸಂದೇಶ ನೀಡಿದರು. ಹುಟ್ಟಿದ ಮನುಷ್ಯ ಕೊನೆಗೆ ಒಂದು `ದಿನ ಮಣ್ಣಿನ ಮನೆಗೆ ತೆರಳಲೇಬೇಕು, ಜೀವನವೆಂಬುದು ತೆರೆದಿಟ್ಟ ಪುಸ್ತವಿದ್ದಂತೆ, ಮೊದಲ ಮತ್ತು ಕೊನೆಯ ಪುಟ ಭಗವಂತನದಾಗಿದ್ದು, ಮಧ್ಯದ ಪುಟಗಳೆಂಬ ಬದುಕಿನಲ್ಲಿ ಹೆಸರು ಉಳಿಯುವಂತಹ ಸತ್ಕಾರ್ಯ ಮಾಡಿದರೆ ಜೀವನ ಸಾರ್ಥಕವಾಗಲಿದೆ ಎಂದರು.
ಪೂರ್ವ ಋಷಿಮುನಿಗಳು, ಆಚಾರ್ಯರು, ಮಹಾತ್ಮರು ಅರಿತು ಬಾಳಿದರೆ ಬದುಕು ಬಂಗಾರ, ಮರೆತು ಬಾಳಿದರೆ ಜೀವನ ಬಂಧನಕಾರಿ ಎಂದು ಎಚ್ಚರಿಸುವ ಜತೆಗೆ ಸಂಸ್ಕಾರ ನೀಡುತ್ತ ಭವಿಷ್ಯತ್ತಿನ ದಿನಗಳಲ್ಲಿ ಸಂಘಟಿಸಬಹುದಾದ ವಿಚಾರಗಳನ್ನು శల ತಪಸ್ವಿಗಳು, ಜ್ಞಾನಿಗಳು ಸೂಚ್ಯವಾಗಿ ಎಚ್ಚರಿಕೆ ಕೊಡುತ್ತಾ ಬರುತ್ತಿದ್ದಾರೆ. ಧರ್ಮಪೀಠ, ಮಠ-ಮಾನ್ಯಗಳು ನಿರಂತರವಾಗಿ ಮಾರ್ಗದರ್ಶನ ನೀಡುತ್ತ ಬರುತ್ತಿದ್ದರೂ ಕವಲು ದಾರಿ ಮತ್ತು ಕಲುಷಿತ ವಾತಾವರಣ ಕಾಣುತ್ತಿದ್ದು, ಮಹಾತ್ಮರ ಬೋಧನೆ ಎಲ್ಲರ ಬಾಳಿಗೆ ಆಶಾಕಿರಣವಾಗಿದೆ ಎಂದರು.
ಜೊಳ್ಳು ಜೊಡ್ಕೊಂದಾರುತೈತಿ, ಪುಟ್ಟಿ ಕಾಳೊಂದುಳಿಯುತೈತಿ ಎಂಬ ಕಾಲಜ್ಞಾನದ ನುಡಿಯಂತ ಜೊಳ್ಳು ಕಾಳುಗಳು ದೂರವಾಗಿ, ಗಟ್ಟಿ, ಕಾಳುಗಳು ರಾಶಿಯಲ್ಲಿ ಉಳಿಯಲಿವೆ. 'ಯಾರು ಪುಣ್ಯದ ಬುತ್ತಿ ಸಂಪಾದಿಸುವರೋ ಅವರ ಬದುಕಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ದುರಾಚಾರ, ಅನಾಚಾರದಿಂದ ನಡೆದರೆ ತಕ್ಕ ಪ್ರಾಯಶ್ಚಿತ್ತ ಅನುಭವಿಸುತ್ತಾರೆ. ಮರೆತು ಮಲಗಿದರೆ ಜೀವನದಲ್ಲಿ ಉತ್ಕರ್ಷಗಳನ್ನು ಕಾಣಲು ಸಾಧ್ಯವಿಲ್ಲ. ವೀರಶೈವ ಧರ್ಮವು ಸಂಸ್ಕಾರ, ಸಂಸ್ಕೃತಿಯ ಅರಿವನ್ನುಂಟು ಮಾಡುವ ಕಾರಣದಿಂದ ಪ್ರಾಚೀನ ಧರ್ಮವೆನಿಸಿಕೊಂಡಿದೆ ಎಂದರು.
ಮಹಾತ್ಮರ ನುಡಿಗಳು... ತತ್ಕಾಲದಲ್ಲಿ ಫಲ ನೀಡದಿದ್ದರೂ ಮುಂದೊಂದು ದಿನ ಫಲಕೊಡುವುದೆಂಬ ನಂಬಿಕೆ ಇರಬೇಕು, ಆಪತ್ಕಾಲದ ಸಹಾಯ ಪುಣ್ಯದ ಫಲ ಮರು ಪ್ರಾಪ್ತಿಗೆ ರಹದಾರಿಯಾಗಿದೆ. ವೀರಶೈವ ಧರ್ಮವು ತನ್ನ ಜತೆ ಇತರರೂ ಶಾಂತಿ, ನೆಮ್ಮದಿ, ಸನ್ಮಾರ್ಗ, ಸಂಸ್ಕಾರದಿಂದ ಬದುಕಿ ಬಾಳಬೇಕೆಂಬ ಸದಾಶಯದ ಧರ್ಮವಾಗಿದ್ದರಿಂದ ದೂರದೃಷ್ಟಿ ಮತ್ತು ವೈಶಾಲ್ಯ ಮನೋಭಾವನೆಯ ಸರ್ವ ಜನಾಂಗದ ಉಸಿರಾಗಿ ಕಂಗೊಳಿಸುತ್ತಿದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸರ್ಮದ್ದಿ ಸರ್ವರಿಗಾಗಲಿ ಎಂಬ ಹಾರೈಕೆ ರಂಭಾಪುರಿ ಪೀಠದ ಸಂದೇಶವಾಗಿದೆ ಎಂದು ಹೇಳಿದರು. ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು. ಮಾಗಣಗೇರಿ ಬೃಹನ್ಮಠದ ಶಿವಾಚಾರ್ಯರು, ಸಿದ್ದರಬೆಟ್ಟದ ವೀರಭದ ಶಿವಾಚಾರ್ಯರು, ಮಾಣಿಕೇಶ್ವರಿ ಮಠದ ನಂದಿಕೇಶ್ವರಿ ಮಾತಾ ಇದ್ದರು.

Social Plugin