೩೫೨ ವರ್ಷದ ಹಿಂದೆ ಅಜೀವರಾಗಿ ಬೃಂದಾವನ ಪ್ರವೇಶಿಸಿದ ದಿನವನ್ನು ಪ್ರತಿಭಕ್ತರು ಗುರುಗಳ ಸ್ಮರಣೆ ಮಾಡಬೇಕು.ಎಕೆಂದರೆ ಬೃಂದಾವನ ಪ್ರವೇಶಿಸಿದ ದಿನದಿಂದ ೭೦೦ ವರ್ಷಗಳ ಕಾಲ ಅವರ ಭಕ್ತರ ಆಶೋತ್ತರ ಈಡೇರಿಸುವ ಭರವಸೆ ನೀಡಿ ಬೃಂದಾವಸ್ತರಾಗಿದ್ದರು. ಅಂದಿನಿಂದ ಇಂದಿನವರೆಗೂ ಆಶರೀರವಾಗಿ ಭಕ್ತರನ್ನು ಕಾಪಾಡಿಕೊಂಡು ಬರುತ್ತಿದ್ದು, ಅವರ ನೆಲೆಸಿರುವ ಮಂತ್ರಾಲಯಕ್ಕೆ ದಿನಪ್ರತಿ ಸಾವಿರಾರು ಭಕ್ತರು ಭೇಟಿ ನೀಡುತ್ತಿರುವುದೇ ಅವರ ಮಹತ್ವ ತೋರಿಸುತ್ತದೆ. ಅವರು ರಚಿಸಿರುವ ಹರಿನಾಮ ಸಂಕೀರ್ತನೆ ಹಾಗೂ ತತ್ವಗಳು ಇಂದಿಗೂ ಭಕ್ತಿಪರಾವಶತೆಗೆ ಮಾರ್ಗವಾಗಿದೆ.
ಬೆಂಗಳೂರು : 352 ನೇ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವದಲ್ಲಿ ಬೆಂಗಳೂರು ನಗರದ ಉಲ್ಲಾಳು ಉಪನಗರದಲ್ಲಿ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಖ್ಯಾತ ಕಲಾ ದಂಪತಿಗಳಾದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ತಮ್ಮ ಸೂರ್ಯ ಕಲಾವಿದರು ತಂಡದಿಂದ ನೃತ್ಯ ಕಾರ್ಯಕ್ರಮ ನೀಡಿದರು.
Social Plugin