ಸಂಗೀತ ರಸಮಂಜರಿ ಕಾರ್ಯಕ್ರಮವನ್ನು
ದಿ.25.08.2023 ರ ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ದೃಶ್ಯ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಕೊಲಂಬೋ ನಗರದಲ್ಲಿ ಏರ್ಪಡಿಸಲಾಗಿದೆ* ಸಮಾರಂಭದಲ್ಲಿ ಹೆಸರಾಂತ ಗಾಯಕ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ಮತ್ತು ಸೌಂಡ್ ಆಫ್ ಮ್ಯೂಸಿಕ್ ವಾದ್ಯಗೋಷ್ಠಿಯ ರೂವಾರಿ ಶ್ರೀ ಕೆ. ಗುರುರಾಜ್ ಇವರನ್ನು ಸನ್ಮಾನಿಸಲಾಗುತ್ತದೆ.
ಈ ಭಾರತೀಯ ಸಾಂಸ್ಕೃತಿಕ ಹಬ್ಬವನ್ನು ಶ್ರೀಲಂಕಾ ದೇಶದ ಕೇಂದ್ರ ಸರ್ಕಾರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಚಿವರಾದ ಶ್ರೀ ವಿದುರ ವಿಕ್ರಮ ನಾಯಿಕೆ ರವರು ಉದ್ಘಾಟಿಸಲಿದ್ದಾರೆ. ಶ್ರೀ ಸುರೇಂದ್ರ ರಾಘವನ್ ಉನ್ನತ ಶಿಕ್ಷಣ ಸಚಿವರು ಶ್ರೀಲಂಕಾ ಸರ್ಕಾರ ಇವರು ಅಧ್ಯಕ್ಷೆಯನ್ನು ವಹಿಸಲಿದ್ದಾರೆ. ಶ್ರೀಲಂಕಾ ಕನ್ನಡಿಗರು ಹಾಗೂ ಶ್ರೀಲಂಕಾ ನಾಗರಿಕರು ಕೂಡ ಪಾಲ್ಗೊಳ್ಳುವ ಈ ಅದ್ದೂರಿ ಸಾಂಸ್ಕೃತಿಕ ಸಮಾರಂಭದಲ್ಲಿ ನೃತ್ಯ ಪ್ರದರ್ಶನ,ಬಹುಭಾಷಾ ಕವಿತಾ ವಾಚನ,ಮತ್ತು ಜಾಗತಿಕ ಶಾಂತಿ- ಸಾಮರಸ್ಯದ ಕುರಿತು ಉಪನ್ಯಾಸಗಳಿರುತ್ತವೆ. ಕೊನೆಯಲ್ಲಿ ಸಾಧಕರಿಗೆ ಪ್ರಶಸ್ತಿ ಹಾಗೂ ಭಾಗವಹಿಸಿದ ಎಲ್ಲ ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ಸ್ಮರಣಿಕೆಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದೆಂದು ಸಮಿತಿ ಅಧ್ಯಕ್ಷರಾದ ಶ್ರೀ ಕೆ. ಪಿ. ಮಂಜುನಾಥ್ ಸಾಗರ್ ಅವರು ತಿಳಿಸಿದ್ದಾರೆ.

Social Plugin