1-ಜುಲೈ-2023 ರಂದು ಬೆಳಗಾವಿ ದಕ್ಷಿಣ ಕಾಂಗ್ರೆಸ್ ನಾಯಕಿ *ಶ್ರೀಮತಿ ಪ್ರಭಾವತಿ ಮಾಸ್ತಮರಡಿ* ಅವರು, ನೇಕಾರರಿಗೆ ವಿದ್ಯುತ್ ದರ ಇಳಿಕೆ ಬಗ್ಗೆ ನಿಯೋಗವನ್ನು ಕೊಂಡೊಯ್ದು, ನೇಕಾರರು ಅನುಭವಿಸುತ್ತಿರುವ ಕಷ್ಟವನ್ನು ಪರಿಸಹರಿಸುವಂತೆ, ಮಾನ್ಯ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ *ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ* ಅವರಲ್ಲಿ ಮನವಿ ಮಾಡಿದ್ದರು. ಅದಲ್ಲದೇ, ಬೆಂಗಳೂರಿಗೂ ಸಹ ತೆರಳಿ ಮಂತ್ರಿ ಮಂಡಲದ ಅನೇಕ ಸಚಿವರಿಗೆ ಮನವಿ ಮಾಡಿದ್ದರು. ಅದರ ಫಲವಾಗಿ ಇಂದು ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ನೇಕಾರರಿಗೆ 10HP ವರೆಗಿನ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ.
ಇದು ಸಮಸ್ತ ನೇಕಾರರ ಜಯ ಮತ್ತು ನೇಕಾರ ನಾಯಕಿ ಶ್ರೀಮತಿ ಪ್ರಭಾವತಿ ಮಾಸ್ತಮರಡಿ ಅವರ ಜಯ.

Social Plugin