ಎಂ.ಎಂ.ಎಂ ಗ್ರೂಪ್ಸ್ - ಚಲನಚಿತ್ರ ಮಾರ್ಕೆಟಿಂಗ್ ಮಾಸ್ಟರ್ ಮೈಂಡ್ಸ್ , 2017 ರಲ್ಲಿ ರಾಜಾಜಿ ನಗರದ ಸಣ್ಣ ಕೋಣೆಯೊಂದರಲ್ಲಿ ಚೇತನ್ - ಮಿಥುನ್ ಸಹೋದರರಿಂದ ಸಿನೆಮಾ ಪ್ರಚಾರಕ ಸ್ಟ್ಯಾಂಡಿ ಮತ್ತು ಪೋಸ್ಟರ್ ಡಿಸೈನ್ ಸೇವೆಗಳ ಮೂಲಕ ಆರಂಭವಾದ ಈ ಸಂಸ್ಥೆ ಪ್ರಸ್ತುತ ಕೆಂಚಾಪುರ ಕ್ರಾಸ್ ಬಳಿ ಐದು ಅಂತಸ್ತಿನ ಕಟ್ಟಡದಲ್ಲಿ ಪ್ರಿಂಟಿಂಗ್, ಫೋಟೋಗ್ರಾಫಿ, ವಿಡಿಯೋಗ್ರಫಿ,ವಿಡಿಯೋ ಎಡಿಟಿಂಗ್, ಡಿ. ಐ, ವಿ.ಎಫ್.ಎಕ್ಸ್, ಡಬ್ಬಿಂಗ್ ಮುಂತಾದ ಪೋಸ್ಟ್ ಪ್ರೊಡಕ್ಷನ್ ಗೆ ಸಂಬಂಧಿಸಿದ ಸೇವೆಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.
2022ರಲ್ಲಿ ಮಂಗಳೂರಿನಲ್ಲಿ ಹಾಗೂ 2023ರಲ್ಲಿ ಕೊಚ್ಚಿಯಲ್ಲಿ ಈ ಸಂಸ್ಥೆಯ ಅಂಗ ಸಂಸ್ಥೆಗಳು ಆರಂಭವಾಗಿದ್ದು, ಉತ್ತಮ ಗುಣಮಟ್ಟದ ಸೇವೆಯನ್ನು ನೀಡಿ ಜನಮನ್ನಣೆ ಪಾತ್ರವಾಗಿವೆ.
ಸಿನೆಮಾ ಪ್ರಚಾರಕ ಸ್ಟ್ಯಾಂಡಿಗಳನ್ನು ತಯಾರು ಮಾಡುವುದರಲ್ಲಿ ಈ ಸಂಸ್ಥೆ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿದ್ದು, ಉತ್ತರ ಭಾರತದ ಕಡೆಯೂ ಸೇವೆಗಳನ್ನು ನೀಡುವತ್ತ ಗಮನ ಹರಿಸುತ್ತಿದೆ. ಈ ಸಂಸ್ಥೆಯಿಂದ ತಯಾರಾಗಿರುವ 777 ಚಾರ್ಲಿ, ರವಿ ಬೋಪಣ್ಣ , ರಾಬರ್ಟ್, ವಿಕ್ರಮ ವೇದ, ಮುಂತಾದ ಸ್ಟ್ಯಾಂಡಿಗಳು ತುಂಬಾ ಜನಮನ್ನಣೆಗೆ ಪಾತ್ರವಾಗಿವೆ. ಈ ಸಂಸ್ಥೆ ಚಿತ್ರರಂಗಕ್ಕೆ ಇನ್ನಷ್ಟು ಸೇವೆ ನೀಡಿ, ದೊಡ್ಡ ಸಂಸ್ಥೆ ಯಾಗಿ ಬೆಳೆಯಲಿ ಎಂಬುವುದು ಸ್ವರೂಪ ಸಂದರ್ಶನ ಪತ್ರಿಕೆಯ ಆಶಯ.