ಸಂಗೀತ ಸಾಮ್ರಾಟ್ ಪಂಡಿತ ಶರಣ್ ಚೌಧರಿ ಅವರ ವಿಶೇಷ ಪರಿಚಯ..
ಪಂಡಿತ ಶರಣ್ ಚೌಧರಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರು, ಸಂಗೀತ ಸಂಯೋಜಕರು ಹಾಗೂ ನಿರ್ದೇಶಕರು. ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಂಶು ಪಾಲರು - ಶರಣ್ಸ್ ಮ್ಯೂಸಿಕ್ ಅಕಾಡೆಮಿ. ಶರಣ್ ಚೌಧರಿ ಅವರು ದಿನಾಂಕ ೨೩-೦೪-೧೯೮೪ ರಂದು ರಾಯಚೂರಿನಲ್ಲಿ ಜನಿಸಿದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ದವರಾದ ಶರಣ ಚೌಧರಿ ಅವರು ಕಳೆದ ೨೮ ವರ್ಷದಿಂದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ೪ ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಬರೀ ೯ ವರ್ಷದವರಿದ್ದಾಗ ಗದಗನ ಪಂಡಿತ ಪುಟ್ಟರಾಜ ಗವಾಯಿಗಳಿಂದ 'ಕಿರಿಯ ಸಂಗೀತ ಸಾಮ್ರಾಟ್' ಪ್ರಶಸ್ತಿಯನ್ನು ಪಡೆದರು. ಝೇಂಕಾರ ಭಾರತಿ ಸಂಗೀತ ಮತ್ತು ಸಾಂಸ್ಕೃತಿಕ ಕೇಂದ್ರದಿಂದ "ಝೇಂಕಾರ ಗಾನವಾರಿಧಿ" ಪ್ರಶಸ್ತಿ, ಎಸ್.ಆರ್.ಎ. ಶೈಕ್ಷಣಿಕ ಸಂಸ್ಥೆಯಿಂದ 'ಬೆಸ್ಟ್ ಅಚೀವರ್' ಪ್ರಶಸ್ತಿ, ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯ ಮಂಡಲದಿಂದ 'ವಿದ್ವಾನ್' ಹೀಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಮತ್ತು ಬಿರುದುಗಳನ್ನು ಪಡೆದಿದ್ದಾರೆ. ಅಂತರರಾಷ್ಟ್ರೀಯ ಹಿಂದೂಸ್ತಾನಿ ಹಾಗೂ ಸುಗಮ ಸಂಗೀತ ಗಾಯಕರಾಗಿರುವ ಅವರು ದೇಶ ವಿದೇಶಗಳಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇತ್ತೀಚೆಗೆ ಕೊಣ್ಣೂರು ಶಿಕ್ಷಣ ಸಂಸ್ಥೆ ಆಯೋಜಿಸಿದ್ದ 'ಕೊಣ್ಣೂರು ನುಡಿ ಸಡಗರ' ಎಂಬ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡಿರುತ್ತಾರೆ. ತಮ್ಮ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಮುಧೋಳದ ಜಯ ವಿಜಯ್ ಶಾಲೆಯಲ್ಲಿ ಮುಗಿಸಿದರು, ನಂತರ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ವಿದ್ಯಾಭ್ಯಾಸವನ್ನು ಬನಹಟ್ಟಿಯ ಎಸ್.ಆರ್.ಎ. ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು. ತದನಂತರ ಇಂಜಿನೀಯರಿಂಗ್  ಆಯ್ಕೆ ಮಾಡಿಕೊಂಡು ಬಿ.ಎಲ್.ಡಿ.ಇ.ಎ. ಸಂಸ್ಥೆಯ ವಿಜಯನಗರ ಇಂಜಿನಿಯರಿಂಗ್  ಕಾಲೇಜಿನಿಂದ ಆಟೋಮೊಬೈಲ್ ಇಂಜಿನಿಯರಿಂಗ್ ಅನ್ನು ಕಲಿತರು. ಇವಿಷ್ಟು ಅವರ ವಿದ್ಯಾಭ್ಯಾಸದ ಕುರಿತಾದ ವಿವರಗಳು, ಈಗ ಅವರು ಸಂಗೀತದಲ್ಲಿ ರುಚಿ ಮೂಡಿಸಿ ಕೊಂಡು ಅದರಲ್ಲಿ ಹೇಗೆ ತಮ್ಮನ್ನು ತಾವೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಯೋಣ. ಚಿಕ್ಕಂದಿನಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಒಲವು ಹೊಂದಿದ್ದ ಅವರಿಗೆ ಸಂಗೀತ ಸರಸ್ವತಿ ಆಶೀರ್ವದಿಸಿದಳು. ಮುಧೋಳನ ಗವಾಯಿ ಗಳಾದ ವಿದ್ವಾನ ನಿಂಗಪ್ಪಣ್ಣ ಡಂಗಿ ಅವರ ಹತ್ತಿರ ಸಂಗೀತ ಕಲಿಯಲು ಪ್ರಾರಂಭಿಸಿದ ಅವರು ತಮ್ಮ ಗುರುಗಳ ಹತ್ತಿರ ೧೫ ವರ್ಷಗಳ ಕಾಲ ಸಂಗೀತವನ್ನು ಕಲಿತರು. ಸಂಗೀತಾಭ್ಯಾಸವನ್ನು ಶೃದ್ಧೆಯಿಂದ ಕಲಿತ ಅವರು ಮುಂಬೈನ ಎಬಿಜಿಎಮ್ ಸಂಸ್ಥೆ ಯಿಂದ ೨೦೦೧ರಲ್ಲಿ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಉತ್ತೀರ್ಣರಾದರು, ಮುಂದೆ ೨೦೦೩ರಲ್ಲಿ ಕರ್ನಾಟಕ ಬೋರ್ಡ್ ನಿಂದ ವಿಧ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ವಿದ್ಯಾಭ್ಯಾಸ ದಲ್ಲೂ ಮುಂದಿದ್ದ ಅವರುi ಆಟೋ ಮೊಬೈಲ್ ಇಂಜಿನಿಯರಿಂಗ್  ಮುಗಿದ ನಂತರ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಪ್ರಾರಂಭಿಸಿದರು. ತಮ್ಮ ಬುದ್ಧಿವಂತಿಕೆಯಿಂದ ಅನೇಕ ಪೇಟೆಂಟ್‌ಗಳನ್ನೂ ಪಡೆದರು. ಆದರೆ ಸಂಗೀತದ ಕಡೆಯಿದ್ದ ಅವರ ಒಲವು ಅವರನ್ನು ಸಂಪೂರ್ಣವಾಗಿ ಸಂಗೀತದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿತು. ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸಂಗೀತ ಕ್ಷೇತ್ರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು. ಬೆಂಗಳೂರಿನಲ್ಲಿ ಶರಣ್ಸ್ ಮ್ಯೂಸಿಕ್ ಅಕಾಡೆಮಿ ಎಂಬ ಸಂಗೀತ ಸಂಸ್ಥೆಯನ್ನು ಪ್ರಾರಂಭಿಸಿದರು. ಕಳೆದ ಹಲವು ವರ್ಷಗಳಿಂದ ತಮ್ಮ ಸಂಗೀತ ಶಾಲೆಯಲ್ಲಿ ಅನೇಕ ಸಂಗೀತಾಸಕ್ತರಿಗೆ ಸಂಗೀತದ ತರಬೇತಿ ಯನ್ನು ನೀಡುತ್ತಿದ್ದಾರೆ. ಅನೇಕ ಸಂಗೀತ ಸಂಯೋಜನೆಗಳನ್ನು ಮಾಡಿ ಹಲವು ಪುರಸ್ಕಾರಗಳನ್ನು ಪಡೆದಿರುವ ಅವರು ಈ ಸಂಸ್ಥೆಯ ಮೂಲಕ ಅನೇಕ ಯುವಪ್ರತಿಭೆಗಳನ್ನು ಹುಟ್ಟುಹಾಕಿ, ಅವರಿಗೆ ಗಮನಾರ್ಹ ಸಾಧನೆ ಮಾಡಲು ಅವಕಾಶ ಕಲ್ಪಿಸು ತ್ತಿದ್ದಾರೆ. ಅಂತರರಾಷ್ಟ್ರೀಯ ಹಿಂದೂಸ್ತಾನಿ ಹಾಗೂ ಸುಗಮ ಸಂಗೀತ ಗಾಯಕರಾಗಿರುವ ಅವರು ಸಂಗೀತ ನಿರ್ದೇಶನದಲ್ಲಿಯೂ ಸೈ ಅನಿಸಿಕೊಂಡಿರುವ ಬಹು ಪ್ರತಿಭಾನ್ವಿತ ಕಲಾವಿದರು. ಅವರ ಶಿಶ್ಯರಾದ ರುಮಿತ್ ಅವರ ಪ್ರತಿಭೆಯನ್ನು ಸಂಗೀತ ಪ್ರಪಂಚಕ್ಕೆ ಪರಿಚಯಿಸುವ ಉದ್ದೇಶದಿಂದ 'ಗೆಳೆತನ' ಎಂಬ ಕನ್ನಡ ಮತ್ತು 'ದೋಸ್ತಿ' ಎಂಬ ಹಿಂದಿ ಅಲ್ಬಮ್ಗಳಿಗೆ ಸಂಗೀತ ಸಂಯೋಜನೆ ಮತ್ತು ನಿರ್ದೇಶನ ಮಾಡಿ ಸಂಗೀತ ಪ್ರೇಮಿಗಳಿಗೆ ಸುಮಧುರ ಹಾಡುಗಳನ್ನು ನೀಡಿದ್ದಾರೆ. ಅವರ ಈ ಅಲ್ಬಮ್ಗಳನ್ನು ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮೆಚ್ಚಿ ಇವರ ಪ್ರಯತ್ನವನ್ನು ಹಾಡಿ ಹೊಗಳಿದ್ದಾರೆ. ನಂತರ ರುಮಿತ್ ಹಾಗೂ ಹೆಸರಾಂತ ಗಾಯಕಿ ಅನುರಾಧಾ ಭಟ್ ಅವರ ಜೊತೆಗೆ 'ಮನಸೇ ನಿನ್ನಾ ದಾರಿಯು ಎಲ್ಲಿಗೆ' ಎಂಬ ಕನ್ನಡ ಮತ್ತು 'ಏ ಮನ್ ಕಹಾಂ ಚಲಾ ತೂ' ಎಂಬ ಹಿಂದಿ ಅಲ್ಬಂಗಳಿಗೆ ಸಂಗೀತ ಸಂಯೋಜನೆ ಮತ್ತು ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ನಡೆದ ಕೀಮ ಅಂತರರಾಷ್ಟ್ರೀಯ ಸಂಗೀತ ಪ್ರಶಸ್ತಿ ಕಾರ್ಯಕ್ರಮದಲ್ಲಿ ಇವರು ಸಂಗೀತ ಸಂಯೋಜನೆ ಮತ್ತು ನಿರ್ದೇಶನ ಮಾಡಿದ ಸಂಗೀತ ಆಲ್ಬಮ್ 'ಗೆಳೆತನ' ನಾಮನಿರ್ದೇಶನಗೊಂಡಿತು. ಇವರ ಶರಣ್ಸ್ ಮ್ಯೂಸಿಕ್ ಅಕಾಡಮಿಯಲ್ಲಿ ಸಂಗೀತಾಸಕ್ತರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಹಿನ್ನೆಲೆ ಗಾಯನ, ಸುಗಮ ಸಂಗೀತ, ಗಿಟಾರ್, ಕೀಬೋರ್ಡ್, ಪಿಯಾನೋ, ತಬಲಾ, ಹಾರ್ಮೋನಿಯಂಗಳನ್ನು ಕಲಿಯಬಹುದಾಗಿದೆ. ಇಲ್ಲಿ ಸಂಗೀತ ಶಿಕ್ಷಣ ನೀಡುವುದಲ್ಲದೇ ವಿದ್ಯಾರ್ಥಿಗಳಿಗೆ ಬೆಳೆಯಲು ಪ್ರೋತ್ಸಾಹ ಮತ್ತು ಅವಕಾಶ ಎರಡನ್ನೂ ಒದಗಿಸಲಾಗುತ್ತಿದೆ. ಇವರ ಸಂಗೀತ ಸಂಸ್ಥೆ ಶರಣ್ಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಕಲಿಯುತ್ತಿರುವ ಅನೇಕ ವಿದ್ಯಾರ್ಥಿ ಗಳು ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ; ಶ್ರೀಮತಿ ಅನುಪಮಾ ದೇಸಾಯಿ, ಶ್ರೀಮತಿ ವೀಣಾ ಸೂರಿ, ರೂಮಿತ್ ಕೆ. ನವೀನ ಚಂದ್ರ ಶ್ರುತಿ ಮೋಹನ್ , ಶ್ರೀಮತಿ ಭಾರತಿ ಕೆ. ಹೀಗೆ ಇನ್ನೂ ಹಲವಾರು ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಪ್ರೋತ್ಸಾಹ ಮತ್ತು ಅವಕಾಶ ಎರಡನ್ನೂ ಪಂಡಿತ್ ಶರಣ ಚೌಧರಿ ಅವರು ಒದಗಿಸುತ್ತಿದ್ದಾರೆ. ಪ್ರಸ್ತುತವಾಗಿ ಅವರು ಬೆಂಗಳೂರಿನಲ್ಲಿರುವ ಶರಣ್ಸ್ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾಗಿ, ವಿಜಯಪುರದಲ್ಲಿರುವ ಸ್ವರ ಸಂಪದ ಸಂಗೀತ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾಗಿ ಹಾಗೂ ಸಂಗೀತ ಮಂಡಳಿ ಯಲ್ಲಿ ಪರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದೆ ಸಂಗೀತ ಕ್ಷೇತ್ರದಲ್ಲಿ ಇನ್ನೂ ಅನೇಕ ಸಾಧನೆಗಳನ್ನು ಮಾಡುವ ಮಹಾತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಶರಣ್ಸ್ ಮ್ಯೂಸಿಕ್ ಅಕಾಡಮಿಯಲ್ಲಿ ಸಂಗೀತ ಕಲೆಯಲು ಸಂಪರ್ಕಿಸಿ: ೯೦೩೬೭೯೮೬೦೦
ಚಿಟ್‌ಚಾಟ್ ಪ್ರಶ್ನೆಗಳು: 
ಕರ್ನಾಟಕದಲ್ಲಿ ನೀಮಗೆ ಪ್ರೀಯವಾದ ಸ್ಥಳ? ಮೈಸೂರು. ನಿಮ್ಮ ಫೇವರೆಟ್ ರಾಜಕೀಯ ನಾಯಕರಾರು? ಜೆ ಎಚ್ ಪಟೇಲ್.  ನಿಮ್ಮ ಫೇವರೆಟ್ ಸಿನೆಮಾ ನಟ ಮತ್ತು ನಟಿ ಯಾರು? ಶಂಕರನಾಗ್, ರಮ್ಯಾ.   ನೀವು ಫ್ರೀ ಇದ್ದಾಗ ಏನು ಮಾಡುತ್ತಿರಾ? ಫ್ಯಾಮಿಲಿ ಜೊತೆಗೆ ಪ್ರವಾಸ ಹಾಗು ಸಂಗೀತ ಕೇಳುವುದು, ಸಿನೆಮಾ ನೋಡುತ್ತೇನೆ.  ಕರ್ನಾಟಕದಲ್ಲಿ ಪ್ರಭಾವಶಾಲಿ ಮಹಿಳೆ ಯಾರು? ಒನಕೆ ಓಬವ್ವಾ. ದಿನಕ್ಕೆ ಎಷ್ಟು ಗಂಟೆ ಮೊಬೈಲ್ ಬಳಸುತ್ತಿರಾ? ೬ ರಿಂದ ೮ ಗಂಟೆ. ನಿಮ್ಮ ಇಷ್ಟದ ತಿನಿಸು ಯಾವುದು? ಮಿರ್ಚಿಬಜ್ಜಿ.