ರಾಷ್ಟ್ರೀಯ "ಯುವಸಿರಿ" ಜಯಂತ್ ಕುಮಾರ್
ಅಖಿಲ ಭಾರತೀಯ ವೀರಶೈವ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಾದ ಜಯಂತ್ ಕುಮಾರ ಅವರು 15 ಆಗಷ್ಟ 1988 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. M A Political Since ಪದವಿದರರಾಗಿರುವ ಇವರು ಕಾಲೇಜುನಲ್ಲಿರುವಾಗಲೇ ಅಂದರೆ 2008 ರಲ್ಲೇ ಎಬಿವಿಪಿ ಯಲ್ಲಿ ಸಕ್ರೀಯರಾಗಿರುತ್ತಾರೆ. ನಂತರದ ದಿನಗಳಲ್ಲಿ ಬಿಜೆಪಿ ಪಕ್ಷದಲ್ಲಿ ತಮ್ಮನ್ನು ಗುರುತಿಸಿಕೊಂಡು ತಮ್ಮದೆ ಆದ ಕಾರ್ಯಗಳನ್ನು ಮಾಡಿದ್ದಾರೆ. ಇವರ ಕುರಿತು ವಿಶೇಷವಾಗಿ ಹೇಳುವುದಾದರೆ ದೇಶದ ಅತೀ ಹೆಚ್ಚು ಮಠಮಾನ್ಯಗಳ ಅಭಿವೃದ್ದೀ ಕೆಲಸಗಳನ್ನು ನಿಶ್ವಾರ್ಥವಾಗಿ ಮಾಡಿ ತೊರಿಸುವಲ್ಲಿ ಘನನೀಯ ಸಾಧನೆ ಮಾಡಿದ್ದಾರೆ. ಅದರಲ್ಲೂ 2020 ರಲ್ಲಿ ಇವರು ಅಖಿಲ ಭಾರತೀಯ ವೀರಶೈವ ವೇದಿಕೆಯ ಅಧ್ಯಕ್ಷರಾದ ಮೇಲೆ ಕಾಶಿ ಜಗದ್ಗುರುಗಳು, ಶ್ರೀಶೈಲ್ ಜಗದ್ಗುರುಗಳು, ರಂಭಾಪುರಿ ಜಗದ್ಗುರುಗಳು, ಮಹಾರಾಷ್ಟ್ರದ ಕನ್ನೇರಿ ಮಠದ ಜಗದ್ಗುರುಗಳು, ಸುತ್ತೂರು ಶ್ರೀಗಳು ಹೀಗೆ ಹೇಳುತ್ತಾ ಹೋದರೆ ಎಲ್ಲಾ ಕಡೇ ಇವರು ಅಲ್ಲಿಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಅಲ್ಲದೆ ಮಠಮಾನ್ಯಗಳ ಬಹುಮುಖ್ಯ ಜವಾಬ್ದಾರಿ ಕಾರ್ಯಗಳಿಗೆ ಎಲ್ಲರಿಗೂ ಮೊದಲಿಗೆ ನೆನಪಾಗುವ ಹೇಸರೆ ಶ್ರೀ ಜಯಂತ್ ಕುಮಾರ್ ಅವರದು ಅಂದರೆ ತಪ್ಪಾಗಲಾರದು. ಅವರು ಮಾಡಿರುವ ಕೆಲಸ ಸಾವಿರಾರು. ಸದ್ಯ ಮಖ್ಯವಾಗಿ ಕಾಶಿ ಪೀಠಕ್ಕಾಗಿ ಇವರ ಮುಂದಾಳತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಿ ಕೊಟ್ಟಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಕಾಶಿ ಪೀಠದ ವಿಧ್ಯಾರ್ಥಿ ನಿಲಯಕ್ಕೆ ಸರ್ಕಾರದಿಂದ 2 ಕೋಟಿ ರೂ. ಅನುಧಾನ ಬಿಡಿಗಡೆ ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಬಾಳೆಹೊನ್ನುರು ರಂಭಾಪುರಿ ಮಠಕ್ಕೆ 54 ಕೋಟಿ ರೂ. ಬಿಡುಗಡೆಗಾಗಿ ಅವಿರತ ಶ್ರಮವಹಿಸಿ ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲದೇ ನಾಡಿನ ಹಲವು ಮಠಗಳಿಗೆ ಸರ್ಕಾರಗಳು ಅನುದಾನ ಘೊಷಿಸಿದ್ದರು ಅವು ಅನೇಕ ಸಮಸ್ಯೆಗಳಿಂದ ಮಠಗಳಿಗೆ ತಲುಪದೆ ಇದ್ದ ಸಂಧರ್ಭದಲ್ಲಿ ಇವರು ಖುದ್ದು ಮುತುವರ್ಜಿವಹಿಸಿ, ನಾಡಿನ ಹಲವು ಮಠಗಳಿಗೆ 100 ಕೋಟಿ ರೂ. ಅನುದಾನ ತಲುಪುವಂತೆ ಮಾಡಿಸಿದ ಕೀರ್ತಿಯೂ ಕೂಡ ಇವರಿಗೆ ಸಲ್ಲುತ್ತದೆ. ಇವರ ನಿಶ್ವಾರ್ಥ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚಿ 2022 ರಲ್ಲಿ ರಂಭಾಪುರಿ ಯುವಸಿರಿ ಪ್ರಶಸ್ತಿ, ವೀರಶೈವ ಯುವಸಿರಿ ಪ್ರಶಸ್ತಿ ಚಳ್ಳಗೆರೆ ಪೀಠ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಶಸ್ತಿಗಳ ಭಾಜಕರಾಗಿದ್ದಾರೆ. ಕರ್ನಾಟಕದ ಇವರು ಇಂದು ಮಠಮಾನ್ಯಗಳ ಹಾಗು ಸಾಮಾಜಿಕ ಚಟುವಟಿಕೆಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಜಯಂತ್ ಕುಮಾರ್ ಅವರಿಗೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಇವರ ಧಾರ್ಮಿಕ ಕಾಳಜಿ ಪರಿಗಣಿಸಿ ಇನ್ನೂ ಉತ್ತಮ ಕಾರ್ಯ ನಿರ್ವಹಿಸಲು ಉನ್ನತ ಜವಾಬ್ದಾರಿ ನೀಡಬೇಕಾಗಿದೆ. ಇದು ಪಂಚಪೀಠದ ಎಲ್ಲಾ ಜಗದ್ಗುರುಗಳು ಹಾಗು ಸಾವಿರಾರು ಮಠಾಧಿಪತಿಗಳ ಆಶಯವು ಆಗಿದೆ.