'ಸಂಗೀತ ಮಂಥನ'ದಲ್ಲಿ ಮಿಂದೆದ್ದ ಕಲಾ ಪ್ರೇಮಿಗಳು
ಬೆಂಗಳೂರು : ನಿನ್ನೆ ಸಂಜೆ ಆರ್. ಟಿ ನಗರದ Sharan's Music Academy ಯ ಸಭಾಂಗಣದಲ್ಲಿ ತಿಂಗಳ ಕಾರ್ಯಕ್ರಮ "ಸಂಗೀತ ಮಂಥನ" ವಿಶಿಷ್ಟವಾಗಿ ಜರುಗಿತು. 
ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಜಾನಪದ ವಿದ್ವಾoಸರಾದ ಪ್ರೊ. B. R. Policepatil ಮುಖ್ಯ ಅತಿಥಿಗಳಾಗಿ ಸಂಗೀತ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸಂಗೀತದ ಮಹತ್ವದ ಕುರಿತು ಉಪನ್ಯಾಸ ನೀಡಿ ನೆರೆದವರನ್ನು ಮಂತ್ರ ಮುಗ್ದರನ್ನಾಗಿಸಿದರು. ಹಾಗೂ ಉದಯೋನ್ಮುಖ ಪ್ರತಿಭೆ ಗೋವಿಂದರಾವ್ ಎಸ್. ವಿಶೇಷ ಆಹ್ವಾನಿತ ಗಾಯಕರಾಗಿ ತಮ್ಮ ಸುಮಧುರ ಕಂಠದಿಂದ ಪ್ರೇಕ್ಷಕರ ಗಮನ ಸೆಳೆದರು. ಆಕಾಡೆಮಿಯ ವಿದ್ಯಾರ್ಥಿಗಳಾದ ಕುಮಾರಿ ಉಪಾಸನಾ, ಗಾನವಿ, ಅನ್ವಿತಾ ಬನ್ಸೋಡೆ, ಶ್ರೀಮತಿ ನಿಶಾ ಅಭಿಜಿತ್, ಇಲಿಯಾಸ್ ಅಹಮದ್ ಮತ್ತು ಮಾಸ್ಟರ್ ನಿನಾದ್ ಚೌಧರಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಭಾವಗೀತೆ ಕನ್ನಡ ಹಾಗೂ ಹಿಂದೀ ಚಲನಚಿತ್ರ ಗೀತೆಗಳನ್ನು ಹಾಡಿ ಕಲಾಪ್ರೆಮಿಗಳನ್ನು ರಂಜಿಸಿದರು. ಸಂಗೀತ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅಕ್ಷತಾ ಮುರಗೋಡ, ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಸಂಸ್ಥೆಯ ಮುಖ್ಯ ಗುರುಗಳಾದ ಪಂಡಿತ್ ಶರಣ್ ಚೌಧರಿ ಮಾತನಾಡಿ ಪಾಲಕರ ಸಹಕಾರ ಹಾಗೂ ಸಂಗೀತ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕುಮಾರಿ ಕೆ.ಲಹರಿ ನಿರೂಪಕಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.