ಈ ಭಾಗದ ನೇಕಾರರಿಗೆ ಉನ್ನತ ವೈದ್ಯಕೀಯ ಸೇವೆ ಗಗನಕುಸುಮವಾಗುತ್ತಿರುವ ಹಿನ್ನಲೆ ಹೊಸ ಹೊಸ ಹೈಟೆಕ್ ಆಸ್ಪತ್ರೆಗಳು ಹಾಗು ಉನ್ನತ ವ್ಯಾಸಾಂಗ ಮಾಡಿದ ವೈದ್ಯರು ರಬಕವಿ-ಬನಹಟ್ಟಿ ನಗರದಲ್ಲಿ ಚಿಕಿತ್ಸೆ ಒದಗಿಸುವಲ್ಲಿ ಮುಂದಾಗಿರುವದರಿಂದ ನೇಕಾರ ಸಮುದಾಯಕ್ಕೆ ಸುಲಭವಾಗಿ ಹೆಚ್ಚಿನ ಆರೋಗ್ಯ ಚಿಕಿತ್ಸೆ ದೊರಕಲು ಸಾಧ್ಯವಾಗಲಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಬನಹಟ್ಟಿಯ ಭದ್ರನ್ನವರ ಸಮುದಾಯ ಭವನದಲ್ಲಿ ಡಾ. ಶ್ವೇತಾ ಮೆಮೋರಿಯಲ್ ಆಸ್ಪತ್ರೆಯಿಂದ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ಕçಷ್ಟ ಸೇವೆಯೊಂದಿಗೆ ಬಡಜನತೆಯ ಸೇವೆಗೆ ಮುಂದಾಗುವಲ್ಲಿ ಈ ಭಾಗದ ವೈದ್ಯರು ಅವಿರತವಾಗಿ ಶ್ರಮಿಸುತ್ತ, ಹುಟ್ಟೂರಿನ ಜನತೆಗೆ ಸುಲಭವಾಗಿ ಆರೋಗ್ಯ ಚಿಕಿತ್ಸೆ ದೊರಕಲೆಂಬ ಉದ್ದೇಶದಿಂದ ಯೋಜನೆಗಳನ್ನು ರೂಪಿಸುತ್ತಿರುವದನ್ನು ಸ್ವಾಗತಿಸುತ್ತೇನೆಂದು ಸವದಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತೇರದಾಳ ಎಸ್‌ಡಿಎಂ ಸಮೂಹ ಸಂಸ್ಥೆ ಸಂಸ್ಥಾಪಕ ಡಾ. ಎಂ.ಎಸ್. ದಾನಿಗೊಂಡ ಮಾತನಾಡಿ, ತೀರಾ ಹಿಂದುಳಿದ ಪ್ರದೇಶವಾಗಿರುವ ಈ ಭಾಗ ಇದೀಗ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತ, ವೈದ್ಯಕೀಯ ಸೇವೆಯಲ್ಲಿಯೂ ತನ್ನದೇಯಾದ ವರ್ಚಸ್ಸು ಬೆಳೆಸಿಕೊಳ್ಳುತ್ತ, ಯುವ ವೈದ್ಯರ ಸೇವೆಗೆ ಮುಂದಾಗಿರುವದು ಹೆಮ್ಮೆಯೆನಿಸುತ್ತಿದೆ ಎಂದರು.
ಸಾನಿಧ್ಯವನ್ನು ಹಿರೇಮಠದ ಶರಣಬಸವ ಶಿವಾಚಾರ್ಯರು ವಹಿಸಿದ್ದರು.
ಅತಿಥಿಗಳಾಗಿ ಡಾ. ಕೆ.ಡಿ. ಭದ್ರನ್ನವರ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಡಾ. ಅಭಿನಂದನ ಡೋರ್ಲೆ, ಡಾ. ಸಂಗಮೇಶ ಹತಪಕಿ, ಬಸವರಾಜ ಭದ್ರನ್ನವರ ರಾಜಶೇಖರ ಹಿರೇಮಠ, ಶಂಕರ ಜುಂಜಪ್ಪನವರ, ವಿಜಯ ಜುಂಜಪ್ಪನವರ, ಶೈಲಜಾ ಮುರಗುಂಡಿ, ರಾಜೀವ ನಾಯಕ, ಡಾ. ಅಭಿಲಾಶ ಜುಂಜಪ್ಪನವರ, ಡಾ. ಚೈತ್ರಾ, ಸುರೇಶ ಚಿಂಡಕ, ಮಲ್ಲಣ್ಣ ಕಕಮರಿ, ಓಂಪ್ರಕಾಶ ಕಾಬರಾ, ಸಿದ್ರಾಮ ಸವದತ್ತಿ ಸೇರಿದಂತೆ ಅನೇಕರಿದ್ದರು.

Social Plugin