ವಯಸ್ಸು ತೊಭತ್ತರ ಹತ್ತಿರಕ್ಕಿದ್ದರೂ ಇನ್ನೂ ಯುವಕನಂತೆ ಓಡಾಡಿಕೊಂಡಿದ್ದರು. ತೀರಾ ಸಣ್ಣ ವಯಸ್ಸಿಗೇ ಚಿತ್ರರಂಗಕ್ಕೆ ಬಂದು ಬಾಲ ನಟರಾಗಿ ಹೆಸರು ಮಾಡಿದ್ದರು. ಸ್ಕೂಲ್ ಮಾಸ್ಟರ್ ರತ್ನಗಿರಿ ರಹಸ್ಯ, ಕೃಷ್ಣಗಾರುಡಿ, ಧರ್ಮವಿಜಯ, ಭಕ್ತವಿಜಯ, ಆಶಾಸುಂದರಿ, ವೀರಸಂಕಲ್ಪ ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವ ಪಡೆದು ನಂತರ ಮನೆಕಟ್ಟಿನೋಡು ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಪದವೀಧರ, ನಮ್ಮ ಊರು, ಮಹಡಿಯ ಮನೆ, ಹೊಯ್ಸಳ, ಮಹಾ ತಪಸ್ವಿ, ವೀರಮಹಾದೇವ ಚಿತ್ರಗಳನ್ನು ನಿರ್ದೇಶನ ಮಾಡಿದರು. ಇವರದ್ದೇ ನಿರ್ದೇಶನದ ಕನ್ನಡ ಕುವರ ತಯಾರಾಗಿ ದಶಕಗಳು ಉರುಳಿದರೂ ಬಿಡುಗಡೆಯಾಗದೇ ಉಳಿದಿಬಿಟ್ಟಿದೆ. 1994ರಲ್ಲಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದ ಸಿವಿಎಸ್ ಅವರ ಹೈದಯವಿಂದು ಸ್ತಂಭನಕ್ಕೆ ಒಳಗಾಗಿ ಉಸಿರು ನಿಲ್ಲಿಸಿದ್ದಾರೆ....
#RIP #cvshivashankar

Social Plugin