ದೇಶದಲ್ಲಿಯೇ ಮೊದಲ ಬಾರಿ 1902ರಲ್ಲಿ ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ಜಾತಿಯವರಿಗೆ ಶೇಕಡಾ 50ರಷ್ಟನ್ನು ಮೀಸಲಿಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡವರು ಕೊಲ್ಹಾಪುರದ ಅರಸ ಶಾಹು ಮಹಾರಾಜ್. ಅವರಿಗೆ ಆಗ 28 ವರ್ಷ.
ಈ ಮೀಸಲಾತಿ ಜಾರಿಗೆ ಬಂದು 20 ವರ್ಷಗಳ ನಂತರ ಶಾಹು ಮಹಾರಾಜ್ ನಿಧನರಾದರು. ಈ ಅವಧಿಯಲ್ಲಿ ಸರ್ಕಾರಿ ಉದ್ಯೋಗದಲ್ಲಿ ಅಬ್ರಾಹ್ಮಣರ ಪ್ರಮಾಣ ಶೇಕಡಾ 5.63 ರಿಂದ ಶೇಕಡಾ 62.11ಕ್ಕೆ ಮತ್ತು ಖಾಸಗಿ ಕ್ಷೇತ್ರದಲ್ಲಿ ಅಬ್ರಾಹ್ಮಣ ನೌಕರರ ಪ್ರಮಾಣ ಶೇಕಡಾ 13.71ರಿಂದ ಶೇಕಡಾ 71.71ಕ್ಕೆ ಏರಿತ್ತು.
ಉದ್ಯೋಗ ಪಡೆಯಲು ಹಿಂದುಳಿದ ಜಾತಿಗಳಲ್ಲಿ ಅರ್ಹರ ಸಂಖ್ಯೆ ಕಡಿಮೆ ಎಂದು ಗೊತ್ತಾದಾಗ ಶಾಹು ಮಹಾರಾಜ್, ಕಡ್ಡಾಯ ಉಚಿತ ಪ್ರಾಥಮಿಕ ಶಿಕ್ಷಣ ಕಾಯ್ದೆಯನ್ನು 1917ರಲ್ಲಿ ಜಾರಿಗೆ ತಂದಿದ್ದರು. ಈ ಕಾಯ್ದೆ ಜಾರಿಗೆ ತಂದಿದ್ದಾಗ ಸಂಸ್ಥಾನದಲ್ಲಿ 1296 ವಿದ್ಯಾರ್ಥಿಗಳನ್ನೊಳಗೊಂಡ 27 ಪ್ರಾಥಮಿಕ ಶಾಲೆಗಳಿದ್ದರೆ, ಶಾಹು ಮಹಾರಾಜ್ ನಿಧನರಾದಾಗ ಶಾಲೆಗಳ ಸಂಖ್ಯೆ 420ಕ್ಕೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ 22000ಕ್ಕೆ ಏರಿತ್ತು.
ಇವೆಲ್ಲದರ ಜೊತೆಗೆ 1917ರಲ್ಲಿ ಕಡ್ಡಾಯ ಉಚಿತ ಪ್ರಾಥಮಿಕ ಶಿಕ್ಷಣ ಕಾಯ್ದೆ . 1919ರಲ್ಲಿ ಅಂತರಜಾತಿ-ಅಂತರಧರ್ಮ ವಿವಾಹ ರಕ್ಷಣೆ ಕಾಯ್ದೆ, ಮಹಿಳಾ ದೌರ್ಜನ್ಯ ವಿರೋಧಿ ಕಾಯ್ದೆ, ಮತ್ತು ಅಸ್ಪೃಶ್ಯತಾ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿದ್ದವರು ಶಾಹು ಮಹಾರಾಜ್.

Social Plugin