ಶುಕ್ರವಾರ ಸಂಜೆ ದೆಹಲಿ ಸಾರ್ವಜನಿಕ ಶಾಲೆ ಸಭಾಂಗಣದಲ್ಲಿ ಏರ್ಪಡಿಸಿದ್ದ "ಬಿಲ್ಲವೋತ್ಸವ-೨೦೨೩" ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಸನ್ಮಾನಿಸಲಾಯಿತು. ಕತಾರ್ ದೇಶದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುತ್ತ, ಕರ್ನಾಟಕ ಸಂಘ ಕತಾರ್ ಸದಸ್ಯತ್ವವನ್ನು ದಾಖಲೆಯ ಸಂಖೆಗೆ ಹೆಚ್ಚಿಸಿದ ಹೆಮ್ಮೆಗೆ, ಕನ್ನಡ ಚಲನಚಿತ್ರಗಳನ್ನು ಕತಾರ್ ನಲ್ಲಿ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿಕೊಡುವುದಕ್ಕೆ, ಪರಿಸರ ಪರ ಜಾಗೃತಿಗೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಸುಪ್ರಸಿದ್ದಗೊಳಿಸಿರುವರು, ಕರೋನ ಮಹಾಮರಿಯ ತಾಂದವದ ಕಾಲದಲ್ಲಿ 'ಒಂದೇ ಭಾರತ್' ವಿಶೇಷ ವಿಮಾನ ಸೇವೆಯಲ್ಲಿ ಅವಶ್ಯಕತೆಯಿರುವ ಭಾರತೀಯರನ್ನು ಕತಾರಿನಿಂದ ಮಾತೃ ಭೂಮಿಗೆ ಹಿಂದಿರುಗಲು ಸಹಾಯ ಮಾಡಿರುವುದಕ್ಕೆ ಒಂದು ಕಿರುಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕತಾರ್ ಬಿಲ್ಲವಾಸ್ ಸಂಘದ ಅಧ್ಯಕ್ಷರಾದ ಶ್ರೀ ರಘುನಾಥ ಅಂಚನ್, ಉಪಾಧ್ಯಕ್ಷರಾದ ಶ್ರೀ ಅಮಿತ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾದ ಶ್ರೀಮತಿ ಸೀಮಾ ಪೂಜಾರಿ, ಬಹರೈನ್ ಬಿಲ್ಲವಾಸ್ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ರೂಪೇಶ್ ಶಾಲಿಯನ್, ಬಹರೈನ್ ಬಿಲ್ಲವಾಸ್ ಸಂಘದ ಪೂರ್ವಾಧ್ಯಕ್ಷರಾದ ಶ್ರೀ ಅಜಿತ್ ಬಂಗೇರಾ , ಚಲನಚಿತ್ರ ನಟ ಶ್ರೀ ಪೃಥ್ವಿ ಅಂಬಾರ್ ಪ್ರಸಿದ್ಧ ಚಿಂತಕರಾದ ಡಾ॥ ಅರುಣ್ ಉಲ್ಲಾಳ್ ಹಾಗು ಇನ್ನಿತರ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕತಾರ್ ಕನ್ನಡಿಗರ ಆಶಾಕಿರಣ ಸದಾ ಕನ್ನಡಿಗರ ಸೇವೆಯಲ್ಲಿ ನಿರತರಾಗಿರುವ ಸುಬ್ರಮಣ್ಯ ಹೆಬ್ಬಾಗಿಲು.
ಶ್ರೀಯುತರ ಸೇವೆಯನ್ನು ಗುರುತಿಸಿ ಕತಾರ್ ನ ಬಿಲ್ಲವ ಸಮಾಜದ ಹೆಮ್ಮೆಯ ಸಂಸ್ಥೆ "ಬಿಲ್ಲವಾಸ ಕತಾರ್ " ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಅತ್ಯಂತ ಆದರಪೂರ್ವಕವಾಗಿ 9ನೇ ಜೂನ್ 2023 ರಂದು ಡಿ. ಪಿ ಎಸ್ ಸಭಾಂಗಣ ಕತಾರ್ ನಲ್ಲಿ ಜರುಗಿದ ಬಿಲ್ಲವೋತ್ಸವ-2023 ಕಾರ್ಯಕ್ರಮದಲ್ಲಿ ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀ ಮಣಿಕಂಠನ್, ತುಳುನಾಡ್ ಮತ್ತು ಕನ್ನಡ ಚಲನ ಚಿತ್ರ ನಟರಾದ ಶ್ರೀ ಪೃಥ್ವಿ ಅಂಬರ್, ಅರುಣ್ ಉಳ್ಳಾಲ್ ಮತ್ತು ಬಿಲ್ಲವಾ´ಸ್ ಕತಾರ್ ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.