ಹಿರಿಯ ನಟ ಬಿರಾದರ್ ಅಭಿನಯದ 500ನೇ ಚಿತ್ರ. ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ ಅಭಿನಯದ 500ನೇ ಚಿತ್ರ "90 ಬಿಡಿ ಮನೀಗ್ ನಡಿ". ಈ ಗುರುವಾರ (ಜೂನ್ 29) ರಂದು
ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅಮ್ಮ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಬಿರಾದಾರ್, ಅಭಯ್, ಪ್ರೀತು ಪೂಜಾ, ನೀತಾ, ಆರ್ ಡಿ ಬಾಬು, ವಿವೇಕ್ ಹೊಸಕೋಟೆ, ಮುರುಳಿ, ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ದಿ, ಮುಂತಾದವರಿದ್ದಾರೆ.
ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ರಾಕಿ ರಮೇಶ್ ಸಾಹಸ ನಿರ್ದೇಶನ, ವೀರ್ ಸಮರ್ಥ್ ಹಿನ್ನೆಲೆ ಸಂಗೀತವಿದ್ದು, ಕಿರಣ್ ಶಂಕರ್ ಮತ್ತು ಶಿವು ಭೇರಗಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Social Plugin