ಕೋಡಿಮಠ ಶ್ರೀಗಳ ಭವಿಷ್ಯದ : ಯಾವ ಪಕ್ಷ ಗೆಲ್ಲುತ್ತೆ ಗೊತ್ತಾ ?
ಕೋಡಿಮಠ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯವಾಣಿ ನುಡಿದಿದ್ದಾರೆ . ಪ್ರಸ್ತುತ ಚುನಾವಣೆ ಇರುವುದರಿಂದ ಆ ವಿಚಾರವಾಗಿ ಭವಿಷ್ಯ ನುಡಿದಿದ್ದಾರೆ . ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ . ಮತದಾರ ಪ್ರಭು ಯಾರ ಕೈ ಹಿಡಿಯುತ್ತಾನೆ ಅನ್ನೊ ಕುತೂಹಲ ಸಾಕಷ್ಟಿದೆ . ಕೆಲವರ ಪ್ರಕಾರ ಬಿಜೆಪಿ ಬರುತ್ತೆ ಅನ್ನೊದು . ಇನ್ನೊ ಹಲವು ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ಬರುತ್ತೆ ಅಂತಿದ್ರೆ ಕೋಡಿಮಠದ ಸ್ವಾಮಿಗಳು ಬೇರೆನೆ ಉತ್ತರ ಕೊಟ್ಟಿದ್ದಾರೆ . 
ರಾಜಕೀಯ ವಿದ್ಯಮಾನ, ಮಳೆ ಮೊದಲಾದ ವಿಚಾರಗಳ ಬಗ್ಗೆ ಕೋಡಿಮಠ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯವಾಣಿ ನುಡಿಯುತ್ತಿರುತ್ತಾರೆ , ಈಗ ಒಂದೇ ಪಕ್ಷ ಚುನಾವಣೆಯಲ್ಲಿ ಗೆಲ್ಲುತ್ತೆ ಅನ್ನುವ ಮಾತು ಹೇಳಿದ್ದಾರೆ ‌ . ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ನೀಡಿರುವ ಭವಿಷ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.
" ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಸಮ್ಮಿಶ್ರ ಸರ್ಕಾರ ಈ ಬಾರಿ ಬರುವುದಿಲ್ಲ. ಒಂದೇ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಳ್ಳುತ್ತದೆ " ಎಂದು ಶ್ರೀಗಳು ಹೇಳಿಕೆ ಕೊಟ್ಟಿದ್ದು ಈ ಮಾತಿನಂತೆ ಒಂದೇ ಪಕ್ಷ ಬರುತ್ತಾ ? ಏನ್ ಕತೆ ಚುನಾವಣೆ ನಂತರ ಫಲಿತಾಂಶ ಬಂದ ಮೇಲೆ ನೋಡಬೇಕು .