ನಟ, ನಿರ್ದೇಶಕರಾದ ವಿಕ್ರಂ ಸೂರಿ ರವರ ಚೌಕಾಬಾರ ಕುರಿತು ಅವರ ಮಾತು ಈ ಕೆಳಗಿವೆ...
ಆತ್ಮೀಯ ಕನ್ನಡ ಕಲಾಭಿಮಾನಿಗಳೇ, ಬಹಳ ದಿನಗಳ ನಂತರ ಕನ್ನಡದಲ್ಲಿ ಕಾದಂಬರಿ ಆಧಾರಿತ ಸದಭಿರುಚಿಯ ಕನ್ನಡ ಚಲನ ಚಿತ್ರ ತೆರೆ ಕಾಣುತ್ತಿದ್ದೆ."ಚೌಕಬಾರ" ಚಿತ್ರ ಈಗಾಗಲೇ ಹಲವು ದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಜನ ಮೆಚ್ಚುಗೆ ಗಳಿಸಿದೆ. ಈ ಚಿತ್ರವನ್ನು ನಮ್ಮ ಆತ್ಮೀಯ ಸ್ನೇಹಿತರಾದ ಪ್ರತಿಭಾನ್ವಿತ ಕಲಾವಿದ ನಿರ್ದೇಶಕ "ಪಾ. ಪಾ. ಪಾಂಡು" ಖ್ಯಾತಿಯ ವಿಕ್ರಮ್ ಸೂರಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನಮ್ಮವರೇ ಆದ ಹಲವು ವರ್ಷದ ನಮ್ಮೊಡನಿದ್ದು ಈಗ ತಾಯ್ನಾಡಿನಲ್ಲಿ ನೆಲೆಸಿರುವ ಅಶ್ವಿನ್ ಕುಮಾರ್ ಅವರು ಸುಮಧುರ ಸಂಗೀತ ನೀಡಿದ್ದಾರೆ. ಪ್ರತಿಭಾವಂತ ಕಲಾವಿದರು ಮುಖ್ಯವಾಗಿ "ಸಿಲ್ಲಿ ಲಲ್ಲಿ " ಖ್ಯಾತಿಯ ನಮಿತಾ ರಾವ್, ವಿಹಾನ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ನಮಿತಾ ರಾವ್ ಅವರು ನಿರ್ಮಿಸಿದ್ದಾರೆ.
ಸದ್ಯದಲ್ಲಿಯೇ ಈ ಚಿತ್ರ ಕತಾರ್ ಕನ್ನಡಿಗರ ಮನಸುರೆಗೊಳ್ಳಲು ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳತ್ತಿದೆ. 
ಕತಾರ್ ಕನ್ನಡಿಗರೆಲ್ಲ ಈ ಚಿತ್ರವನ್ನು ನೋಡಿ ಸದಭಿರುಚಿಯ ಚಿತ್ರವನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.