ಮದನಮಟ್ಟಿಯಲ್ಲಿ ದಾಖಲೆಯ ಶೇ. 98.22 ರಷ್ಟು ಮತದಾನ
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಮದನಮಟ್ಟಿ ಗ್ರಾಮದಲ್ಲಿರುವ ಏಕೈಕ ಮತಗಟ್ಟೆ ಸಂಖ್ಯೆ 38 ರಲ್ಲಿ ಒಟ್ಟು 956 ಮತದಾರರ ಪೈಕಿ 939 ಮತಗಳು ಚಲಾವಣೆಗೊಂಡು ದಾಖಲೆಯ ಶೇ.98.22 ರಷ್ಟು ಮತದಾನವಾಗುವಲ್ಲಿ ಕಾರಣವಾಗಿ, ಮಾದರಿ ಚುನಾವಣೆಗೆ ಗ್ರಾಮವು ವಿಶೇಷತೆ ಪಡೆಯುವಲ್ಲಿ ಕಾರಣವಾಗಿದೆ.
ಕಳೆದ 30 ವರ್ಷಗಳಿಂದ ಗ್ರಾಮ ಪಂಚಾಯಿತಿ, ತಾಪಂ, ಜಿಪಂ, ವಿಧಾನಸಭೆ, ಲೋಕಸಭೆ ಹೀಗೆ ಯಾವದೇ ಚುನಾವಣೆಗಳಿದ್ದರೂ ಇಲ್ಲಿ ಮಾತ್ರ ಶೇ.95 ಕ್ಕಿಂತಲೂ ಹೆಚ್ಚು ಮತದಾನವಾದ ಉದಾಹರಣೆಗಳಿವೆ. 
ಈ ಬಾರಿಯೂ ಶೇ. ನೂರರ ಗಡಿ ಮುಟ್ಟುವ ಗುರಿ ಹೊಂದಿದ್ದ ಗ್ರಾಮಸ್ಥರು. ಕೆಲವರು ಸೇನಾ ವಿಭಾಗದಲ್ಲಿ ಸೇವೆಗೆ ತೆರಳಿದ್ದರೆ, ಬೆರಳಣಿಕೆಯಷ್ಟು ಮತದಾರರು ಮೃತರಾಗಿರುವ ಕಾರಣ ಶೇ.98.22 ರಷ್ಟಾಗಿದೆ.
ಮತ ಹಕ್ಕು ಚಲಾಯಿಸುವ ಗ್ರಾಮದ ಎಲ್ಲರೂ ಮತದಾನ ಮಾಡಿರುವದು ವಿಶೇಷವಾಗಿದೆ.