ಡೇರ್ಡೆವಿಲ್ ಮುಸ್ತಾಫಾ ಪ್ರೀಮಿಯರ್ ಶೋ ಟಿಕೆಟ್ ಕೇವಲ 1 ರೂಪಾಯಿಗೆ..ಬುಕ್ಕಿಂಗ್ ಆದ ಕೆಲ ನಿಮಿಷಗಳಲ್ಲಿ ಶಿವಮೊಗ್ಗದಲ್ಲಿ ಟಿಕೆಟ್ ಸೋಲ್ಡ್ ಔಟ್.
ಪೂಚಂತೇ ಪ್ರಪಂಚಕ್ಕೆ ಪ್ರೇಕ್ಷಕಪ್ರಭು ಎಂಟ್ರಿ ಕೊಡೋದಿಕ್ಕೆ ಜಸ್ಟ್ ಒಂದು ದಿನವಷ್ಟೇ ಬಾಕಿ ಇದೆ. ಅದಕ್ಕೂ ಮುನ್ನವೇ ಚಿತ್ರತಂಡ ಮೈಸೂರು, ಬೆಂಗಳೂರು, ಶಿವಮೊಗ್ಗ ಮೂರು ಜಿಲ್ಲೆಗಳ ಪ್ರೀಮಿಯರ್ ಶೋ ಏರ್ಪಡಿಸಿದೆ. ಇಂದು ಈ ಮೂರು ಕಡೆಗಳಲ್ಲಿ ಸಿನಿಮಾ ಪ್ರೀಮಿಯರ್ ಆಗ್ತಿದೆ. ಅದು ನೀವು ನಿರೀಕ್ಷೆ ಮಾಡಲಾಗದ ಟಿಕೆಟ್ ಬೆಲೆಯಲ್ಲಿ. ಕೇವಲ ಒಂದೇ ಒಂದು ರೂಪಾಯಿಗೆ ಶೋ ಆಯೋಜಿಸಲಾಗಿದೆ.
ಶಿವಮೊಗ್ಗದಲ್ಲಿ ಟಿಕೆಟ್ ಬುಕ್ ಆದ ಕೆಲ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನು ಸಿನಿಮಾಪ್ರೇಮಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೇವಲ 1ರೂಪಾಯಿಗೆ ಚಿತ್ರತಂಡ ಪ್ರೀಮಿಯರ್ ಶೋ ಆಯೋಜಿಸಿದೆ. ಇದೇ ಅಲ್ವೇ ಇಡೀ ರಾಜ್ಯ ಖುಷಿಪಡುವ ಸುದ್ದಿ..
ಅಂದಹಾಗೇ ಡೇರ್ಡೆವಿಲ್ ಮುಸ್ತಾಫಾ ಸಿನಿಮಾಗೆ ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಿಂದಲೇ ನಿರ್ಮಿಸಿರುವ ಈ ಚಿತ್ರವನ್ನು ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸುತ್ತಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸುತ್ತಿದೆ.
ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಫಾ ನಿರ್ಮಾಣವಾಗಿದೆ.