50 ದಿನದ ಭಾವನಾತ್ಮಕ ಪಯಣ
ಕನ್ನಡ ಚಿತ್ರರಂಗದಲ್ಲಿ ಸಂಭ್ರಮವೆಂದರೆ ಬರೀ ವಾರ, ತಿಂಗಳು ಬಂಧಿಯಾಗಿರುವ ಕಾಲಮಾನ ಅನ್ನೋ ಮಾತಿದೆ. ವಾರಕ್ಕೆ ತೆರೆಗೆ ಬರುವ ಏಳೆಂಟು ಸಿನಿಮಾಗಳು..ಪರಭಾಷೆ ಚಿತ್ರಗಳ ಅಬ್ಬರ, ಥಿಯೇಟರ್ ಗಳ ಸಮಸ್ಯೆ, ಕ್ವಾಲಿಟಿ ಸಿನಿಮಾಗಳ ಕೊರತೆ ಇದಕ್ಕೆಲ್ಲ ಕಾರಣಗಳು..ಇಷ್ಟೆಲ್ಲದರ ನಡುವೆ ಯಶಸ್ವಿಯಾಗಿ 50 ದಿನ ಪೂರೈಸುವುದು ಕನಸಿನ ಮಾತು. ಆ ಕನಸು ನನಸಗಿರುವ ಖುಷಿ ಈಗ ಹೊಂದಿಸಿ ಬರೆಯಿರಿ ಚಿತ್ರತಂಡದಲ್ಲಿದೆ
ರಾಮೇನಹಳ್ಳಿ ಜಗನ್ನಾಥ್ ಸಾರಥ್ಯದ ಹೊಂದಿಸಿ ಬರೆಯಿರಿ ಸಿನಿಮಾ ಹಾಫ್ ಸೆಂಚೂರಿ ಬಾರಿಸಿದೆ. ಫೆಬ್ರವರಿ 10ರಂದು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಶೋ ಹೆಚ್ಚಿಸಿಕೊಂಡು ಹೌಸ್ ಫುಲ್ ಪ್ರದರ್ಶನ ಕಂಡಿರುವ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ.
ಭಾವನೆಗಳ ಏರಿಳಿತ, ಕಾಲೇಜು ವಿದ್ಯಾರ್ಥಿಗಳ ಮಜವಾದ ಪಯಣ, ಪ್ರೀತಿ ಪ್ರೇಮ, ತುಂಟಾಟ ಮೂಲಕ ಜಾಲಿಯಾಗಿ ಸಾಗುವ ಹೊಂದಿಸಿ ಬರೆಯಿರಿ ಸಿನಿಮಾ ಥಿಯೇಟರ್ ನಲ್ಲಿ ಅದ್ಭುತ ಪ್ರದರ್ಶನ ಕಂಡು ಈಗ ಒಟಿಟಿಗೆ ಲಗ್ಗೆ ಇಟ್ಟಿದೆ. ನಾಳೆಯಿಂದ ಅಮೇಜಾನ್ ಪ್ರೈಮ್ ನಲ್ಲಿ ಚಿತ್ರ ಪ್ರಸಾರವಾಗಲಿದೆ. ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಸೇರಿದಂತೆ ಹಲವರು ನಟಿಸಿರುವ ಸಿನಿಮಾವನ್ನು ರಾಮೇನಹಳ್ಳಿ ಜಗನ್ನಾಥ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ಮಿಸಿ ನಿರ್ದೇಶಿಸಿದ್ದರು, ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಪ್ರೊಫೆಸರ್ ಸ್ಯಾಂಡಲ್ ವುಡ್ ಫ್ಯೂಚರ್ ಡೈರೆಕ್ಟರ್ ಅನ್ನೋದನ್ನು ಪ್ರೋವ್ ಮಾಡಿದ್ದಾರೆ.

Social Plugin