ತೇರದಾಳ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಬಿರುಸುಗೊಂಡ ರಣರಂಗ..!
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರ್ಜುನ ಹಲಗಿಗೌಡರ ಭರ್ಜರಿ ಪ್ರಚಾರ
ನಮ್ಮನ್ನು ನೀವು ಕಳೆದುಕೊಳ್ಳಬೇಡಿ
ನಮ್ಮನ್ನು ನೀವು ಕಳೆದುಕೊಂಡ್ರೆ ನಾವು ಮತ್ತೆ ಸೀಗುವುದಿಲ್ಲ..!
ನಾವು ನಿಮ್ಮನ್ನು ಕಳೆದುಕೊಳ್ಳುವುದಿಲ್ಲ, ಭ್ರಷ್ಟಾಚಾರ ಮುಕ್ತ ಮಾಡುವ ಪಕ್ಷ ಅದು ಆಮ್ ಆದ್ಮಿ ಪಕ್ಷ. ತೇರದಾಳ ಮತಕ್ಷೇತ್ರದ ಮತದಾರರು ಪ್ರಭುದ್ಧರಿದ್ದಾರೆ.
ಈ ಬಾರಿ ನಮ್ಮನ್ನು ಗೆಲ್ಲಿಸುತ್ತಾರೆಂದು ಆತ್ಮವಿಶ್ವಾಸ ನಮಗಿದೆ ಎಂದರು
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳದಲ್ಲಿ ಆಮ್ ಆದ್ಮಿ ಪಕ್ಷದಿಂದ ಭರ್ಜರಿ ರೋಡ್ ಶೋ ಮತ್ತು ಮತಯಾಚನೆ ಕಾರ್ಯಕ್ರಮ ನಡೆಯಿತು.
ದಿನದಿಂದ ದಿನಕ್ಕೆ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ ಮತ್ತು ಬಿಜೆಪಿ ದುರಾಡಳಿತ ಕಂಡು ಸ್ವಯಂ ಪ್ರೇರಿತವಾಗಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಈ ಬಾರಿ ನನ್ನ ಗೆಲವು ಶತಸಿದ್ಧ ಎಂದು ಆಮ್ ಆದ್ಮಿ ಪಕ್ಷದ ಅಧಿಕೃತ ಅಭ್ಯರ್ಥಿ ಅರ್ಜುನ್ ಹಲಗಿಗೌಡರ ಹೇಳಿದರು.
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಗಿರೀಶ ಮಾಲಾಪುರ. ಸಿದ್ದಪ್ಪಣ್ಣ ಮೇಟಿ. ಶಂಕರ ಹುಕ್ಕೇರಿ. ಮಹಾಂತೇಶ ಹಲಸಪ್ಪಗೋಳ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Social Plugin