ತೇರದಾಳ ಮತಕ್ಷೇತ್ರದ ಮತದಾರರು ಸ್ವಾಭಿಮಾನಕ್ಕೆ ಮತವನ್ನು ನೀಡುತ್ತಾರೆಂದು ಆತ್ಮವಿಶ್ವಾಸ ನನಗಿದೆ.
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಕ್ತಮಾಡುವ ಪಕ್ಷ ಆಮ್ ಆದ್ಮಿ ಪಕ್ಷವೇ ಹೊರತು ಯಾವ ಪಕ್ಷವು ಅಲ್ಲ.
ತೇರದಾಳ ಮತಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಜನ ಬೇಸತ್ತಿದ್ದಾರೆ.
ಈ ಬಾರಿ ಬದಲಾವಣೆ ಬಯಸಿ ಆಮ್ ಆದ್ಮಿ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ ಎಂದು ಅಭ್ಯರ್ಥಿ ಅರ್ಜುನ್ ಹಲಗಿಗೌಡರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಪತ್ರಿಕಾ ಭವನದಲ್ಲಿ ಆಮ್ ಆದ್ಮಿ ಪಕ್ಷದ ಅಧಿಕೃತ ಅಭ್ಯರ್ಥಿ ಅರ್ಜುನ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ
ಆಮ್ ಆದ್ಮಿ ಪಕ್ಷದ ಅಧಿಕೃತ ಅಭ್ಯರ್ಥಿ ಅರ್ಜುನ್ ಹಲಗಿಗೌಡರ ಆಸ್ತಿ
8.67.50,000 ಸ್ಥಿರ
67 45000 ಚಿರ
ಒಟ್ಟು 9. 34. 95,000 ಆಸ್ತಿಯನ್ನು ಹೊಂದಿದ್ದೇನೆ ಎಂದು ಹೇಳಿದರು.
ಹಲಗಿಗೌಡರ ಪೆಟ್ರೋಲ್ ಪಂಪ ಹಲಗಿಗೌಡರ ಮೆಡಿಕಲ್ ಶಾಪ್ ಹಲಗಿಗೌಡರ ಡೆವಲಪರ್ಸ್ ಹೀಗೆ ಹಲವಾರು ವ್ಯವಹಾರಗಳು ಇದೆ ಇದರಿಂದ ಬರುವ ಆದಾಯದಲ್ಲಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಿ ಅಧಿಕೃತ ವ್ಯವಹಾರ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾನು ರಾಜಕೀಯಕ್ಕೆ ಹಣವನ್ನು ಮಾಡಿಕೊಳ್ಳಲಿಕ್ಕೆ ಬಂದಿಲ್ಲ
ತೇರದಾಳ ಮತಕ್ಷೇತ್ರದ ಅಭಿವೃದ್ಧಿ ಮಾಡುವ ದೃಷ್ಟಿಯನ್ನು ಇಟ್ಟುಕೊಂಡು ನೂರಾರು ಕನಸುಗಳನ್ನು ಕಟ್ಟಿ ಮತ್ತು ಬಡವರು ನೆಮ್ಮದಿಯಿಂದ ಉದ್ಯೋಗವನ್ನು ಮಾಡಿ ಭ್ರಷ್ಟಾಚಾರ ಮುಕ್ತ ಮಾಡಲು ನಾನು ರಾಜಕೀಯಕ್ಕೆ ಪ್ರವೇಶ ಮಾಡಿದ್ದೇನೆ.
ತೇರದಾಳ ಮತಕ್ಷೇತ್ರದ ಮತದಾರರು ನನಗೆ ಒಂದು ಬಾರಿ ಅವಕಾಶ ಮಾಡಿಕೊಡಿ ತೇರದಾಳ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತೇರದಾಳ ಮತಕ್ಷೇತ್ರದ ರಬಕವಿ ಬನಹಟ್ಟಿ ನಗರ ಘಟಕ ಅಧ್ಯಕ್ಷ ದರಪ್ಪ ಗುಟ್ಲಿ. ಮಹಾಲಿಂಗ ಧರ್ಮಟ್ಟಿ. ನೇತ್ರಾ ಕಡಕೋಳ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Social Plugin