ಪುರಾಸಭೆ ಕಾರ್ಯಾಲಯ ತೇರದಾಳದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟೆ ಹಾಗೂ ತಾಲೂಕ ಸ್ವೀಪ್ ಸಮಿತಿ ರಬಕವಿ ಬನಹಟ್ಟಿ ರವರ ನಿರ್ದೇಶನದಂತೆ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ನಿಮಿತ್ಯ ಸ್ವೀಪ. ಚಟುವಟಿಕೆಗಳ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ಈ ದಿವಸ ಮಕ್ಕಳ ವೇಷ ಭೂಷಣ ಮಾಡುವುದರೊಂದಿಗೆ ಜಾಥಾ ಮೂಲಕ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಬಸವರಾಜ್ ಮುನ್ನೊಳ್ಳಿ AD ನರೇಗಾ ತಾಲೂಕ ಪಂಚಾಯತ್ ಮತ್ತು ಪುರಸಭೆ ತೆರದಾಳ ಮುಖ್ಯ ಅಧಿಕಾರಿಗಳಾದ ಲಾಲಸಾಬ್ ಮುಲ್ಲಾ ಕಚೇರಿ ವ್ಯವಸ್ಥಾಪಕರಾದ ಶ್ರೀ ಮಲ್ಲಿಕಾರ್ಜುನ್ ಬಿರಾದರ್ ಪಾಟೀಲ್ ಹಾಗೂ ಅಂಗನವಾಡಿ ಮೇಲ್ವಿ ಚಾಲಕರಾದ ಶ್ರೀಮತಿ ಪ್ರಭಾವತಿ ಕೋರೆ ಮತ್ತು ತಾಲೂಕ್ ವಲಯ ಸಿಆರ್‌ಪಿಗಳಾದ ಶ್ರೀ ಎ ಆರ್ ಮುಧೋಳ್ ಮತ್ತು ಶ್ರೀ ಮಹೇಶ್ ಸೊರಗಾಂವಿ ಉಪಸ್ಥಿತರಿದ್ದರು.