ರಂಜಾನ್ ಹಾಗು ಮದುವೆ ಹಬ್ಬದ ಉಡುಗೊರೆ
130 ಕ್ಕೂ ಅಧಿಕ ಲಕ್ಕಿ ಕೂಪನ್ ಬಿಡುಗಡೆ
 ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಹಜಾರೆ ಟೆಕ್ಸಟೈಲ್ಸ್ ನಲ್ಲಿ ಸೋಮವಾರ ಸಂಜೆ ರಂಜಾನ್ ಹಾಗು ಮದುವೆ ಹಬ್ಬದ ಉಡುಗೊರೆಯಾಗಿ 130 ಜನರಿಗೆ ಬಂಪರ್ ಕೊಡುಗೆ ಲಕ್ಕಿ ಕೂಪನ್ ಒದಗುವಲ್ಲಿ ಕಾರಣವಾಯಿತು.
ಟೆಕ್ಸಟೈಲ್ಸ್ ನ ಒಡೆಯ ಗಣಪತರಾವ್ ಹಜಾರೆ ಮಾತನಾಡಿ, ಪ್ರತಿ ಹಬ್ಬದ ಸಂದರ್ಭಗಳಲ್ಲಿಯೂ ಲಕ್ಕಿ ಕೂಪನ್ ಡ್ರಾ ನಿರಂತರವಾಗಿದ್ದು, ಈ ಬಾರಿ 130 ಅದೃಷ್ಟವಂತರನ್ನು ಸಾರ್ವಜನಿಕ ಮಧ್ಯದಲ್ಲಿ ಆಯ್ಕೆ ಮಾಡುವಲ್ಲಿ ಕಾರಣವಾಯಿತೆಂದರು.
ಕರ್ನಾಟಕ, ಮಹಾರಾಷ್ಟ್ರ ಹಾಗು ಆಂಧ್ರ ಪ್ರದೇಶ ರಾಜ್ಯಗಳಿಂದ ಆಗಮಿಸುವ ಗ್ರಾಹಕರು ಅದೃಷ್ಟ ಕೂಪನ್‌ದಲ್ಲಿ ಒಳಗೊಂಡಿದ್ದು, ಫ್ರಿಜ್, ಎಲ್‌ಇಡಿಟಿವಿ, ವಾಷಿಂಗ್ ಮಷಿನ್, ಏರ್ ಕೂಲರ್, ಸ್ಮಾರ್ಟ್ ವಾಚ್ ಸೇರಿದಂತೆ 11 ವಸ್ತುಗಳಂತೆ 130ಜನರಿಗೆ ನೀಡಲಾಗುವದು. ಅದೃಷ್ಟವಂತರಿಗೆ ಮಾಹಿತಿ ನೀಡಲಾಗುವದು. 
ಮೇ.2 ರಿಂದ ಅವುಗಳ ಪೂರೈಕೆ ಕ್ರಿಯೆ ನಡೆಯಲಿದೆ ಎಂದು ಪ್ರಸನ್ನ ಹಜಾರೆ ತಿಳಿಸಿದರು.