ಬೆಂಗಳೂರು04: ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳ ಪೈಕಿ ತೇರದಾಳ ವಿಧಾನಸಭಾ ಮತಕ್ಷೇತ್ರ ಕೂಡ ಒಂದು. ಮುಂದಿನ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ತೇರದಾಳದಲ್ಲಿ ಸದ್ಯ ಸ್ಥಳೀಯ ಅಭ್ಯರ್ಥಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು ಅದರಲ್ಲೂ ನೇಕಾರರೇ ನಿರ್ಣಾಯಕ ಮತದಾರರಾದ್ದರಿಂದ ಸ್ಥಳೀಯ ನೇಕಾರ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಅನೇಕ ಸ್ವಾಮೀಜಿಗಳು ಹಾಗು ಸ್ಥಳೀಯ ಮುಖಂಡರೆಲ್ಲರೂ Bjp ಪಕ್ಷದ ಎಲ್ಲಾ ನಾಯಕರುಗಳಿಗೆ ಮನವಿ ಮಾಡಿದ್ದರು. ಆದರೆ ಇಂದಿನ ಅಚ್ಚರಿಯ ಬೆಳವಣಿಗೆ ಅಂದರೆ ಖಚಿತ ಮೂಲಗಳ ಪ್ರಕಾರ Bjp ಕೋರ್ ಕಮಿಟಿಯಲ್ಲಿ ಸಿದ್ದು ಸವದಿ ಯವರ ಹೆಸರನ್ನೇ ಫೈನಲ್ ಮಾಡಲಾಗಿದೆ ಎಂದು ಮೂಲಗಳು ಹೇಳುತ್ತಿವೆ. ಕೊನೆಯದಾಗಿ ಕೇಂದ್ರದ ನಾಯಕರು ತೀರ್ಮಾಣಿಸುವುದು ಒಂದೇ ಬಾಕಿ ಇರುವುದು. ಮತ್ತೊಂದು ಕಡೇ ಗಮನಿಸಬೇಕಾದ ಸಂಗತಿ ಎಂದರೆ ಸಿದ್ದು ಸವದಿಯವರ ಅಭಿಮಾನಿಗಳು, ಕಾರ್ಯಕರ್ತರು ಈಗಾಗಲೇ ಕ್ಷೇತ್ರದಲ್ಲಿ ಮತ್ತೊಮ್ಮೆ ಸಿದ್ದು ಸವದಿ ಸರ್ಕಾರ ಎಂಬ ಸೋಷಿಯಲ್ ಮೀಡಿಯಾ ಪ್ರಚಾರ ಶುರು ಹಚ್ಚಿಕೊಂಡಿರುವುದು ಇದಕ್ಕೆ ಪುಷ್ಟಿ ನೀಡಿದಂತಾಗಿದೆ.