ಮಾಲ್ಡಿವ್ಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಡಾ. ಮುಖ್ಯಗ ಭರದ ಸಿದ್ಧತೆ
ಮಾಲೆ : ಬರುವ ಜುಲೈ 5,6 ಹಾಗೂ 7ರ ಮೂರುದಿನ ಮಾಲ್ಡಿವ್ ರಾಜದಾನಿಯಾದ ಇಲ್ಲಿ ನಡೆಸಲು ಉದ್ದೇಶಿಸಲಾಗಿರುವ ಮಾಲ್ಡಿವ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ -2023ರ ಕುರಿತು ಆಯೋಜಕರಾದ ಧಾರವಾಡ ಮೂಲದ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಎಂ.ಎ ಮುಮ್ಮಿಗಟ್ಟಿ ಅವರು ಪೂರ್ವ ಸಿದ್ದತೆಯಲ್ಲಿ ನಿರತರಾಗಿದ್ದಾರೆ.
ಈಗಾಗಲೇ ಮಾಲೆಯಲ್ಲಿ ಬಿಡಾರ ಹೂಡಿ ಮಾಲ್ಡಿವ್ ದೇಶದ ಭಾರತೀಯ ಸಂಸ್ಕೃತಿ ಕೇಂದ್ರದ ನಿರ್ದೇಶಕಿ ಸೈಯದ್ ತಸ್ವೀರ್ ನಸಿನ್ ಅವರನ್ನು ಭೇಟಿಯಾಗಿ ಸಮಾಲೋಚಿಸಿರುವ ಡಾ. ಮುಮ್ಮಿಗಟ್ಟಿ ಅವರು ಮಾಲ್ಡಿವ್ ದೇಶದ ಕಲೆ ಸಂಸ್ಕೃತಿ ಹಾಗೂ ಸಂಪ್ರದಾಯ ಖಾತೆಯ ಕೇಂದ್ರ ಸಚಿವ ಯುಮ್ಮಾ ಮೌಮುನ್ , ರಾಜ್ಯ ಸಚಿವ ಮೊಹ್ಮದ್ ತಾರೀಖ್ ಉಪಸಚಿವ ಮೊಹ್ಮದ ಇಕ್ರಾಮ್, ಮಾಲ್ಡಿವ್‌ನ
ರಾಷ್ಟ್ರೀಯ ಕಲಾ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಮೌಜ್ ಹಾಗೂ ಮಾಲಿನ ಪ್ರದರ್ಶನ ಕಲಾ ಸೊಸೈಟಿಯ ಚೇರ್ಮನ್ ಮೊಹ್ಮದ್ ರಶೀದ ಹಾಗೂ ಮಾಲ್ಡಿವ್ ಸರ್ಕಾರದ ಸಾರ್ವಜನಿಕ ಮಾಧ್ಯಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲಿ ಖಾಲಿದ ಅವರುಗಳೊಂದಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅಚ್ಚುಕಟ್ಟಾಗಿ ಜರುಗಿಸುವ ಬಗ್ಗೆಮತ್ವದ ಸಮಾಲೋಚನೆ ನಡೆಸಿದ್ದಾರೆ.
Social Plugin