ಈ ಚಿತ್ರದ ಟ್ರೇಲರ್ ಹಾಗೂ ಸಾಂಗ್ ಮೂಲಕ ಸಖತ್ ಕ್ಯೂರಿಯಾಸಿಟಿ ಮೂಡಿಸಿತ್ತು . ನಾಳೆ ಈ ಸಿನಿಮಾ ಬಿಡುಗಡೆ ಆಗಲಿದ್ದು , ಔಕಾಬಾರ ಆಟಕ್ಕೆ ಸಿನಿಪ್ರೇಮಿಗಳು ಕಾಯ್ತಿದ್ದಾರೆ .
ಮಣಿ ಆರ್ ರಾವ್ ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು , ವಿಹಾನ್ ಪ್ರಭಂಜನ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ . ನವಿತಾ ರಾವ್ ಚಿತ್ರವನ್ನ ನಿರ್ದೇಶಿಸಿ ನಟಿಸಿದ್ದಾರೆ . ನಟಿ ಕಾವ್ಯ ರಮೇಶ್ ಸೇರಿದಂತೆ ಸಾಕಷ್ಟು ತಾರಾಗಣ ಚಿತ್ರದಲ್ಲಿದೆ .
ಇನ್ನೂ ಈ ಚಿತ್ರಕ್ಕೆ ಸಾಹಿತಿ ಬಿ ಆರ್ ಲಕ್ಷ್ಮಣರಾವ್ ಹಾಗೂ ಹೆಚ್ ಎಸ್ ವಿ ಅವರ ಸಾಹಿತ್ಯವಿದೆ . ಅದಕ್ಕೆ ಅಶ್ವಿನ್ ಕುಮಾರ್ ರಾಗ ಸಂಯೋಜನೆ ಮಾಡಿದ್ದಾರೆ . ವಿಶಿಷ್ಟ ಪ್ರೇಮ ಕಥೆ ಉಳ್ಳ ಚಿತ್ರ ಇದಾಗಿದೆ . ಎಲ್ಲಾ ತಯಾರಿ ಮುಗಿಸಿಕೊಂಡು ನಾಳೆ ಬೆಳ್ಳಿ ತೆರೆ ಮೇಲೆ ಚೌಕಾಬಾರ ಆಟ ಶುರುವಾಗಲಿದ್ದು , ನಮ್ಮ ಕಡೆಯಿಂದನೂ ಆಲ್ ದಿ ಬೆಸ್ಟ್ .

Social Plugin