ರಾಜಶ್ರೀ ಪೊನ್ನಪ್ಪ ಬಹುಭಾಷಾ ನಟಿ
ಅಭಿನಯದಲ್ಲಿ ಇವರಿಗಿಲ್ಲ ಸಾಟಿ
ಕನ್ನಡದ ಜೊತೆಗೆ ತಮಿಳು,ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ನಾಯಕ ನಟಿಯಾಗಿ ಮಿಂಚಿದ್ದಾರೆ ರಾಜಶ್ರೀ ಪೊನ್ನಪ್ಪ.
ಇದೀಗ ಹಲವಾರು ಹೊಸತನದೊಂದಿಗೆ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ʻತತ್ಮ ತದ್ಭವʼ ಚಿತ್ರದಲ್ಲಿ ʻಶಾಲಿನಿʼ ಪಾತ್ರಕ್ಕೆ ಬಣ್ಣ ಹಚ್ಚಿ ಸಿನಿಪ್ರಿಯರ ಗಮನ ಸೆಳೆಯಲಿದ್ದಾರೆ ರಾಜಶ್ರೀ ಪೊನ್ನಪ್ಪ.

"ತತ್ಸಮ ತದ್ಭವ ಚಿತ್ರದ ಶಾಲಿನಿಯ ಮುದ್ದಾದ ಪಾತ್ರವನ್ನು ನಾನು ತುಂಬಾ ಇಷ್ಟಪಟ್ಟೆ. ಕೊನೆಯವರೆಗೂ ಕುತೂಹಲ ಮೂಡಿಸುವ ಈ ಚಿತ್ರ ನಿಮ್ಮನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ".
- ರಾಜಶ್ರೀ ಪೊನ್ನಪ್ಪ