ಮೊದಲ ಕಂತಾದ ರಣಗಿರಿ ರಹಸ್ಯದಲ್ಲ ಶಿವಾಜಿಯ ಅಗಾಧವಾದ ಬುದ್ಧಿವಂತಿಕೆಯನ್ನು ಕೆಲಸಕ್ಕೆ ಹಚ್ಚಿದ್ದು ಎಲ್ಲರಿಗೂ ನೆನಪಿದೆ. ಆದರೆ ಈ ಚಿತ್ರದಲ್ಲಿ ಕೇಸ್ ನಂ ೧೩೧, ಶಿವಾಜಿಯನ್ನು ಇನ್ನಷ್ಟು ಸಾವಾಲುಗಳಿಗೆ ಒಡ್ಡಲಿದೆ ಎಂದು ನಿರ್ದೇಶಕರು ಹೇಳುತ್ತಾರೆ. ಆ ಚಿತ್ರದಲ್ಲಿದ್ದಂತೆಯೇ, ಇಲ್ಲಿಯೂ ಶಿವಾಜಿಯ ಖಾಸಗಿ ಬದುಕಿನ ಒಂದು ಕಿರುನೋಟವೂ ಬರುತ್ತದೆ. ಮೊದಲ ಕಂತಿನಂತೆಯೇ ಈ ಚಿತ್ರವೂ ಒಂದು ಥಿಯೇಟರ್ ಅನುಭವ ಎನ್ನುತ್ತಾರೆ ಆಕಾಶ್. ಚಿತ್ರಕ್ಕೆ ಆರು ತಿಂಗಳು ಶ್ರಮ ವಹಿಸಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಜೂಡಾ ಸ್ಯಾಂಡಿ. ಚಿತ್ರದ ಸೌಂಡ್ ಎಫ಼ೆಕ್ಟ್ಸ್ ಕೂಡಾ ರಾಜನ್ ಅವರು ಅತ್ಯಂತ ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಓಟಿಟಿ, ಟಿವಿ ಯ ಅನುಭವಕ್ಕಿಂತ, ಮಾಯಾವಿಯ ಜಾಲವನ್ನು ಶಿವಾಜಿ ಹೇಗೆ ಭೇದಿಸುತ್ತಾರೆ ಎಂದು ನೋಡುವುದಕ್ಕೆ ಚಿತ್ರಮಂದಿರದ ವೀಕ್ಷಣೆಯೇ ಸೂಕ್ತ ಎನ್ನುತ್ತಾರೆ ಆಕಾಶ್.
ಚಿತ್ರದ ನಿರ್ಮಾಪಕರು ಪ್ರತಿ ಹಂತದಲ್ಲಿಯೂ, ಚಿತ್ರದ ಗುಣಮಟ್ಟ ಎಲ್ಲಿಯೂ ಕುಂದದಂತೆ ಮುತುವರ್ಜಿ ವಹಿಸಿದ್ದಾರೆ. ಚಿತ್ರಕಥೆಗೆ ಕನ್ಸಲ್ಟೆಂಟ್ ಆಗಿ ಅಭಿಜಿತ್ ವೈ ಆರ್ ಕೆಲಸ ಮಾಡಿದ್ದಾರೆ. ಮೊದಲನೇ ಕಂತಿನಲ್ಲೇ ನಿರೀಕ್ಷೆ ಮೂಡಿಸಿದ್ದ ಶಿವಾಜಿ ಸುರತ್ಕಲ್ ಈಗ ತನ್ನ ಎರಡನೇ ಕಂತಿನೊಂದಿಗೆ ಏಪ್ರಿಲ್ ೧೪ ರಂದು ರಾಜ್ಯಾದ್ಯಂತ ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆ ಆರ್ ಜಿ ಸ್ಟೂಡಿಯೋಸ್ ಬಿಡುಗಡೆ ಮಾಡುತ್ತಿದೆ. ಚಿತ್ರದ ಶೀರ್ಷಿಕೆಯಲ್ಲಿರುವ ಆ ಮಾಯಾವಿ ಯಾರು? ಅವನ ಇಂದ್ರಜಾಲವನ್ನು ಶಿವಾಜಿ ಹೇಗೆ ಮೀರಿ ಗೆಲ್ಲುತ್ತಾರೆ - ಈ ಎಲ್ಲಾ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿಯೇ ಉತ್ತರ ಸಿಗುತ್ತದೆ ಎಂದು ಆಕಾಶ್ ಶ್ರೀವತ್ಸ ಉತ್ಸಾಹದಿಂದ ಹೇಳುತ್ತಾರೆ.

Social Plugin