ಟಾವೆಲ್ ಹಾಕುವ ಸಂಸ್ಕçತಿ ಹೋಗಲಿ
ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವೈದ್ಯಕೀಯದಷ್ಟೇ ಪ್ರಖರವಾಗಿ ಶಿಕ್ಷಣದ ಜ್ಞಾನಾರ್ಜನೆ ಒದಗಿಸುವಲ್ಲಿ ನೆಮ್ಮದಿ ಕಂಡು ಇಂದಿಗೂ ಜನಸಾಮಾನ್ಯರ ಕೂಗಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುವ ಮೂಲಕ ರಾಜಕೀಯ ಮುನ್ನಡಿಗೆ ಇವರೆಡೂ ಪ್ರಮುಖ ಕ್ಷೇತ್ರಗಳಾಗಿದ್ದು, ಈ ಬಾರಿ ಬಿಜೆಪಿ ಪಕ್ಷದಿಂದ ಜನತೆ ಹಾಗು ಹೈಕಮಾಂಡ್ ಸ್ಪರ್ಧೆಗೆ ಆಶೀರ್ವದಿಸಲಿದ್ದಾರೆಂದು ಡಾ. ಎಂ.ಎಸ್. ದಾನಿಗೊಂಡ ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದ ರಬಕವಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನೂರಾರು ಬಿಜೆಪಿ ಮುಖಂಡರ ಹಾಗು ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 4 ದಶಕಗಳಿಂದ ಯಾವದೇ ಪ್ರಚಾರಗಿಟ್ಟಿಸಿಕೊಳ್ಳದೆ ಸಮಾಜದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ವಯಕ್ತಿಕವಾಗಿ ನಿರೀಕ್ಷೆಗೂ ಮೀರಿ ಮಹಾರಾಷ್ಟ್ರ ಹಾಗು ಕರ್ನಾಟಕ ಎರಡೂ ರಾಜ್ಯಗಳಲ್ಲಿ ಶಿಕ್ಷಣದ ಮೂಲಕ ಹೆಸರು ಮಾಡಿದ್ಧೇನೆ. ಯಾವದೇ ಅಭಿಲಾಷೆ, ಖಾಸಗಿ ಹಿತಾಸಕ್ತಿಗಾಗಿ ಸ್ಪರ್ಧೆಗಿಳಿಯುತ್ತಿಲ್ಲ. ಬದಲಾಗಿ ನನ್ನ ಬೆಂಬಲಿಗರ ಒತ್ತಾಯದಿಂದ ಈ ಭಾರಿ ಬಿಜೆಪಿಯಿಂದ ಕಣಕ್ಕಿಳಿಲಿಚ್ಚಿಸದ್ದೇನೆಂದು ದಾನಿಗೊಂಡ ಸ್ಪಷ್ಟಪಡಿಸಿದರು.
ಕ್ಷೇತ್ರದಲ್ಲಿ ಜವಳಿ ಕ್ಷೇತ್ರ, ಗುಡಿ ಕೈಗಾರಿಕೆ ಸೇರಿದಂತೆ ಜನರ ಆರ್ಥಿಕ ಪರಿಸ್ಥಿತಿ, ಉದ್ಯೋಗ, ಜನಜೀವನ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಭಿವೃದ್ಧಿಯತ್ತ ಚಿಂತನೆಯಾಗಬೇಕಿತ್ತು. ಒಟ್ಟಾರೆ ಕ್ಷೇತ್ರ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದು, ಕ್ಷೇತ್ರದ ಜನತೆ ಸ್ಥಳೀಯರಿಗೆ ಅವಕಾಶ ನೀಡಬೇಕೆಂಬ ಕೂಗಿನ ಆದ್ಯತೆ ಮೆರೆಗೆ ಹಾಗು ಮೋದಿ ಭಕ್ತನಾಗಿ ಅವರ ಪ್ರೇರಣೆಯಿಂದಲೇ ಈ ಬಾರಿ ಸ್ಥಳೀಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದೇನೆ. ಈ ಕೂಗು ಜನತೆಯಿಂದ ಹೈಕಮಾಂಡ್‌ವರೆಗೆ ತೆರಳುವಂತೆ ಮಾಡುವಲ್ಲಿ ಮತದಾರರು ಆಶೀರ್ವದಿಸಬೇಕೆಂದರು.
ಟಾವೆಲ್ ಹಾಕುವ ಕ್ಷೇತ್ರವಾಗಿದೆ
ತೇರದಾಳ ವಿಧಾನಸಭಾ ಕ್ಷೇತ್ರವಾದಾಗಿನಿಂದಲೂ ಹೊರಗಿನವರೇ ಕ್ಷೇತ್ರವನ್ನು ಆಳುತ್ತ ಟಾವೆಲ್ ಹಾಕುವ ಕ್ಷೇತ್ರವಾಗಿದೆ. ಸ್ವಕ್ಷೇತ್ರದಲ್ಲಿಯೇ ಸಶಕ್ತರಿದ್ದರೂ ಹೊರಗಿನವರು ಬಂದು ಕಣಕ್ಕಿಳಿಯುವ ಉದ್ದೇಶವೇನು. ಸಾಕಷ್ಟು ಜನರ ಸಕ್ರಿಯ ಮುಖಡರು ಕ್ಷೇತ್ರದಲ್ಲಿರುವಾಗ ಅವರಿಗೇ ಹೈಕಮಾಂಡ್ ಮಣೆ ಹಾಕಬೇಕೆಂದು ದಾನಿಗೊಂಡ ಒತ್ತಾಯಿಸಿದರು.
ಜವಳಿ ಕ್ಷೇತ್ರ ಅಭಿವೃದ್ಧಿ ಶೂನ್ಯ
ಕಳೆದ 20 ವರ್ಷಗಳಿಂದ ನಾನೇ ನಗರಾಧ್ಯಕ್ಷನಿರುವ ಸಂದರ್ಭದಲ್ಲಿ 2 ಎಕರೆಯಷ್ಟು ಭೂಮಿಯನ್ನು ಜವಳಿ ಪಾರ್ಕ್ಗೆ ಮೀಸಲಿಟ್ಟಿದ್ದು, ಈಗಲೂ ಹಾಳು ಕೊಂಪೆಯಾಗಿ ಪ್ರಯೋಜನವಾಗದೆ ಹಾಳು ಬಿದ್ದಿದೆ. ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಪ್ರಮುಖ ಕಾಯಕವಾಗಿರುವ ನೇಕಾರಿಕೆ ನಿರ್ಣಾಮ ಹಂತ ತಲುಪಿರುವದು ವಿಷಾದನೀಯವೆಂದು ಮಾಜಿ ನಗರಾಧ್ಯಕ್ಷ ಎಂ.ಸಿ. ಸಾಬೋಜಿ ಕಟುವಾಗಿ ಟೀಕಿಸಿದರು.
ವರದಿ
ಮಲ್ಲಿಕಾರ್ಜುನ ತುಂಗಳ
ವರದಿಗಾರರು
ಬಾಗಲಕೋಟೆ

Social Plugin