ಈ ಬಾರಿ ತೇರದಾಳ ಮತಕ್ಷೇತ್ರದ ಟಿಕೆಟ್ ಸ್ಥಳೀಯ ನೇಕಾರ ಸಮುದಾಯದವರಿಗೆ ಕೊಡಬೇಕು: ಸ್ವಾಮೀಜಿಗಳು ಹಾಗು ಹಿರಿಯರಿಂದ BJP ರಾಜ್ಯಾಧ್ಯಕ್ಷರಿಗೆ ಹಾಗು ಮಾಜಿ ಮುಖ್ಯಮಂತ್ರಿಗಳಿಗೆ ಮನವಿ 
ಬೆಂಗಳೂರು24 : ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಥಳೀಯ ನೇಕಾರ ಸಮುದಾಯದ ಅಭ್ಯರ್ಥಿಗೆ ಅವಕಾಶ ಕೊಡುವ ಕುರಿತು. ಬಾಗಲಕೋಟೆ ಜಿಲ್ಲೆಯ, ತೇರದಾಳ ವಿಧಾನಸಭಾ ಕ್ಷೇತ್ರ ನೇಕಾರ ಸಮುದಾಯದ ಎಲ್ಲ ಕುರುಹಿನಶೆಟ್ಟಿ ಹಾಗೂ ಹಟಗಾರ ಸಮುದಾಯ ಪೂಜ್ಯ ಶ್ರೀಗಳಾದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಹಾಗೂ ಆಳಂದ ಚನ್ನಬಸವ ಪಟ್ಟದ ದೇವರ ಮತ್ತು ತೇರದಾಳ ಮತಕ್ಷೇತ್ರದ ಕುರುಹಿನಶೆಟ್ಟಿ ಹಾಗೂ ಹಟಗಾರ ಸಮುದಾಯ ಹಿರಿಯ ಮುಖಂಡರು ಬೆಂಗಳೂರಿನ BJP ಕಚೇರಿಯಲ್ಲಿ BJP ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರಿಗೆ ಭೇಟಿಯಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರ ಸಮುದಾಯ 2,36,000 ಮತದಾರರು ಇದ್ದು, ಹಾಗೂ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,30,000 ಮತಗಳ ಪೈಕಿ ಎರಡು ಸಮುದಾಯದ ನೇಕಾರರ ಒಟ್ಟು ಮತದಾರರು: 70 - 80 ಸಾವಿರ ಮತದಾರರು ಇರುತ್ತವೆ. ಆದಕಾರಣ ನೇಕಾರರ ಸಮುದಾಯವು ಕಳೆದ 40 ವರ್ಷಗಳಿಂದ ವಂಚಿತರಾಗಿರುತ್ತಾರೆ. ಕಾರಣ ಈ ಬಾರಿ ನಡೆಯುವ 2023 ವಿಧಾನಸಭಾ ಚುನಾವಣೆಗೆ ಸ್ಥಳೀಯ ಕುರುಹಿನಶೆಟ್ಟಿ, ಅಥವಾ ಹಟಗಾರ ಸಮುದಾಯ ಇಬ್ಬರು ಆಕಾಂಕ್ಷಿಗಳಾದ ಮನೋಹರ ಶಿರೋಳ ಅಥವಾ ರಾಜೇಂದ್ರ ಅಂಬಲಿ ಅವರಲ್ಲಿ ಒಬ್ಬರಿಗೆ ನೀಡಿದ್ದೇ ಆದಲ್ಲಿ ಎರಡೂ ಸಮುದಾಯವು ಒಗ್ಗಟ್ಟಿನಿಂದ ಪ್ರಚಂಡ ಬಹುಮತದಿಂದ ಆಯ್ಕೆ ಮಾಡುತ್ತೇವೆ ಎಂದು ಮನವಿ ಪತ್ರ ನೀಡಿದರು ಅಲ್ಲದೇ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನಾರವರಿಗೂ ಮನವಿ ನೀಡಲಾಯಿತು. ತದನಂತರ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಗೃಹಕಚೇರಿಗೆ ತೆರಳಿದ ನೇಕಾರ ಸಮುದಾಯದ ಸ್ವಾಮೀಜಿಗಳು ಹಾಗು ಹಿರಿಯರು ಈ ಬಾರಿ ತೇರದಾಳ ಮತಕ್ಷೇತ್ರದ ಟಿಕೆಟ್ ನ್ನು ಸ್ಥಳೀಯ ಕುರುಹಿನಶೆಟ್ಟಿ, ಅಥವಾ ಹಟಗಾರ ಸಮುದಾಯ ಇಬ್ಬರು ಆಕಾಂಕ್ಷಿಗಳಾದ ಮನೋಹರ ಶಿರೋಳ ಅಥವಾ ರಾಜೇಂದ್ರ ಅಂಬಲಿ ಅವರಲ್ಲಿ ಒಬ್ಬರಿಗೆ ನೀಡಿದ್ದೇ ಆದಲ್ಲಿ ಎರಡೂ ಸಮುದಾಯವು ಒಗ್ಗಟ್ಟಿನಿಂದ ಪ್ರಚಂಡ ಬಹುಮತದಿಂದ ಆಯ್ಕೆ ಮಾಡುತ್ತೇವೆ ಎಂದು ಮನವಿ ಪತ್ರ ನೀಡಿದರು.