ಬನಹಟ್ಟಿಯಲ್ಲಿ ದಿ.5 ರಂದು ಉಚಿತ `ಆರೋಗ್ಯ ಸಿರಿ’
  ತೇರದಾಳ ಕ್ಷೇತ್ರದಾದ್ಯಂತ ಬಡಕುಟುಂಬಗಳ ಸಹಾಯಕ್ಕೆ ಸದಾ ಅಭಯಹಸ್ತ ಚಾಚುತ್ತಿರುವ ಮೂಲಕ ನೆಮ್ಮದಿ ಕಂಡಿದ್ದು, ಇದೀಗ ಬರುವ ಮಾರ್ಚ್ 5 ರಂದು ಬನಹಟ್ಟಿಯ ಎಸ್‌ಟಿಸಿ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆಯೊಂದಿಗೆ ಔಷಧೋಪಚಾರದೊಂದಿಗೆ ಅರ್ಥಪೂರ್ಣವಾದ `ಆರೋಗ್ಯ ಸಿರಿ’ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ,ಹಿರಿಯ ವೈದ್ಯ ಡಾ. ಎಂ.ಎಸ್. ದಡ್ಡೇನವರ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ
ಬನಹಟ್ಟಿಯಲ್ಲಿ ಕಾರ್ಯಕ್ರಮದ ಪರಿಕರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸುತ್ತಲಿನ ಸುಮಾರು 30 ಗ್ರಾಮಗಳಿಂದಲೂ 10 ಸಾವಿರಕ್ಕೂ ಅಧಿಕ ಜನರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, 20 ನುರಿತ ವೈದ್ಯರಿಂದ 8-10 ವಿಭಾಗಗಳಾಗಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಎಲುಬು, ಹೃದಯ, ಸಕ್ಕರೆ, ಬಂಜೆತನ, ಕಿವಿ-ಮೂಗು-ಗಂಟಲು, ಚಿಕ್ಕ ಮಕ್ಕಳ, ಜನರಲ್ ಸರ್ಜರಿ, ಫಿಜಿಯೋಥೆರಪಿ ಸೇರಿದಂತೆ ಒಂದೇ ಸೂರಿನಲ್ಲಿ ಉಚಿತವಾಗಿ ಚಿಕಿತ್ಸೆ ಒದಗಿಸುವ ಮೂಲ ಉದ್ದೇಶವಾಗಿದೆ ಎಂದು ದಡ್ಡೇನವರ ತಿಳಿಸಿದರು.
ಅಂದು ಬೆಳಿಗ್ಗೆ 10 ಕ್ಕೆ ಕಾರ್ಯಕ್ರಮವು ಜೆಎಸ್‌ಎಸ್ ಸಂಘದ ಅಧ್ಯಕ್ಷ ಬಸವರಾಜ ಭದ್ರನ್ನವರ ಅಧ್ಯಕ್ಷತೆಯಲ್ಲಿ ಡಾ. ಎಂ.ಎಸ್. ದಡ್ಡೇನವರ ಉದ್ಘಾಟಿಸಲಿದ್ದಾರೆ.
 ಅತಿಥಿಗಳಾಗಿ ಸಂಘದ ಚೇರಮನ್ ಬಸವರಾಜ ಜಾಡಗೌಡ, ರಾಮಣ್ಣ ಭದ್ರನ್ನವರ, ಎಂ.ಜಿ. ಕೆರೂರ, ಡಾ. ವಿ.ಆರ್. ಕುಳ್ಳಿ, ದುಂಡಪ್ಪ ಮಾಚಕನೂರ, ಶಂಕರ ಸೊರಗಾಂವಿ, ಓಂಪ್ರಕಾಶ ಕಾಬರಾ, ಶಂಕರ ಜಾಲಿಗಿಡದ, ಭೀಮಶಿ ಕುಲಗೋಡ, ಶ್ರೀಶೈಲ ಯಾದವಾಡ, ಗಂಗಾಧರ ಕೊಕಟನೂರ, ಮಲ್ಲಿಕಾರ್ಜುನ ಬಾನಕಾರ ಡಾ. ಜಿ.ಆರ್. ಜುನ್ನಾಯ್ಕರ ಪಾಲ್ಗೊಳ್ಳಲಿದ್ದಾರೆಂದು ಪ್ರೊ. ವಾಯ್.ಬಿ. ಕೊರಡೂರ ತಿಳಿಸಿದರು.
 ಹೆಚ್ಚಿನ ಮಾಹಿತಿಗೆ 96119-18918/99868-59256 ಮೊಬೈಲ್ ನಂಬರ್‌ನ್ನು ಸಂಪರ್ಕಿಸಬಹುದು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ