https://drive.google.com/file/d/1Gvta2JpMv_QO-Zrd8WYsSTVd3raoeF5D/view?usp=drivesdk
ಇದಕ್ಕಿಂತ ಸಾರ್ಥಕತೆ ಇನ್ನೇನಿದೆ?? ಇಲ್ಲಿಯವರೆಗಿನ ನನ್ನ ಸಿನಿ ಪಯಣದಲ್ಲಿ ಇಂತಹ ಭಾವುಕ ಸಂಗತಿ ಎಂದೂ ಘಟಿಸಿಲ್ಲಾ. ಹರಿವು ನೈಜ ಘಟನೆ ಆಧರಿಸಿದ ಕತೆಯಾದರು, ಮೂಲ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶ ದೊರೆಕಿರಲಿಲ್ಲಾ. ಆದರೆ ಈ ಬಾರಿ ಸಿನೆಮಾ ಮಾಡುವ ಮೊದಲು ಅವರೊಂದಿಗಿನ ಒಡನಾಟ ಹಾಗೂ ಆ ನಂತರ ಅವರದೇ ಕತೆಯ ಸಿನೆಮಾ ಅವರಿಗೆ ತೋರಿಸುವ ಅವಕಾಶ ಮೊದಲ ಬಾರಿಗೆ ದಕ್ಕಿತು. ಅದರಲ್ಲು ಆ ಸಮುದಾಯದ ಬಹುತೇಕರು ಮೊದಲ ಬಾರಿಗೆ ಚಿತ್ರಮಂದಿರದ ಒಳಗೆ ಪ್ರವೇಶ ಮಾಡಿರುವುದು. ಅವರದೇ ಬದುಕಿನ ಪುಟ್ಟ ಭಾಗವನ್ನು ಸಿನೆಮಾ ರೂಪದಲ್ಲಿ ತೆರೆಯ ಮೇಲೆ ಕಂಡ ನಂತರ ಆ ಮುಗ್ಧ ಕಣ್ಣಲ್ಲಿ ಕಾಣಿಸಿದ್ದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದು. ಆ ಕ್ಷಣಗಳಲ್ಲಿ ಆ ಕಣ್ಣುಗಳ ಮೂಲಕ ಅವರು ದಾಟಿಸಿದ ಪ್ರೀತಿ ಎದೆಯಾಳವನ್ನು ಹೊಕ್ಕು ಶಾಶ್ವತವಾಗಿ ಕೂತುಬಿಟ್ಟಿದೆ. ಅವರು ತಮ್ಮ ಬೆಚ್ಚನೆಯ ಕೈಯಲ್ಲಿ ನನ್ನ ಕೈಹಿಡಿದು ಮಾತೇ ಆಡದೇ ನೀಡಿದ ಮೆಚ್ಚುಗೆಯ ಮುಂದೆ ಇನ್ಯಾವ ಪ್ರಶಸ್ತಿ ಗೌರವಗಳು ಸರಿಗಟ್ಟಲಾರವೇನೊ. ಹೌದು ಇವರು ಅದೇ ಮಲೆಕುಡಿಯರು. ದಶಕಗಳ ಕಾಲ ದೌರ್ಜನ್ಯವನ್ನು ಅನುಭವಿಸುತ್ತಾ, ನ್ಯಾಯಯುತ ಹೋರಾಟದಿಂದಲೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವವರು. ಇದು ಅವರದೇ ಕತೆ. ಈ ಜೀವಕ್ಕೆ ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕಿದೆ?
#film192021
#Dcreations
#SatyaHegdeStudios

Social Plugin