Bjp ಪ್ರಧಾನ ಕಾರ್ಯದರ್ಶಿ ಸಂತೋಷ ಜಿ ಹಾಗು ನಳಿನ್ ಕುಮಾರ ಕಟೀಲ್ ರವರಿಗೆ ಮನವಿ...
ಬೆಂಗಳೂರು 24: ಖ್ಯಾತ ಜವಳಿ ಉದ್ಯಮಿ BJP ನಾಯಕರಾದ ಮಲ್ಲಿಕಾರ್ಜುನ ಜ ಬಾಣಕಾರರವರು ಮೊನ್ನೆ ಬಾಗಲಕೋಟ ಜಿಲ್ಲಾ BJP ಕಾರ್ಯಲಯದ ಮೂಲಕ BJP ರಾಜ್ಯಾಧ್ಯಕ್ಷರಿಗೆ ತಾವು BJP ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಮನವಿ ಸಲ್ಲಿಸಿದ್ಧರು. ಇಂದು ಖುದ್ದು ಮಲ್ಲಿಕಾರ್ಜುನ ಬಾಣಕಾರರವರು ಬೆಂಗಳೂರಿನಲ್ಲಿ BJP ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು BJP ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಜಿ ಯವರನ್ನು ಭೇಟಿಯಾಗಿ ತಾವು ತೇರದಾಳ ಮತಕ್ಷೇತ್ರದ BJP ಅಭ್ಯರ್ಥಿಯಾಗಿ ಈ ಬಾರಿಯ ಚುನಾವಣೆಗೆ ಸ್ಪರ್ದಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಅಲ್ಲದೇ ಇಷ್ಟು ವರ್ಷ BJP ಪಕ್ಷದಲ್ಲಿ ಇದ್ದು ಅವರು ಮಾಡಿರುವ ಸಮಾಜ ಸೇವೆಗಳು ಪಕ್ಷದ ಚಟುವಟಿಕೆಗಳನ್ನು ಪಕ್ಷದ ವರಿಷ್ಟರಿಗೆ ಮನವರಿಕೆ ಮಾಡಿದರು. ಅಲ್ಲದೇ ರಾಜ್ಯದಲ್ಲೇ ತೇರದಾಳ ಮತಕ್ಷೇತ್ರ ನೇಕಾರರ ಮತಕ್ಷೇತ್ರವೆಂದು ಪರಿಗಣಿಸಿ, ನಾನು ನೇಕಾರರ ಪ್ರಬಲ ನಾಯಕರಾದ್ದರಿಂದ ಈ ಬಾರಿಯ bjp B ಫಾರ್ಮ ನನಗೆ ನೀಡಬೇಕೆಂದು ಮನವಿ ಮಾಡಿಕೊಂಡರು.