ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಎಲ್ಲ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಕುದುರೆ ಬಾಲದಂತೆ ಉದ್ದವಾಗುತ್ತಿದ್ದು ಇದಕ್ಕೆ ಸಾಕ್ಷಿಯಂಬಂತೆ ತೇರದಾಳ ಮತಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುವುದು ನಿಶ್ಚಿತವೆಂಬಂತೆ ಭಾಸವಾಗುತ್ತಿದ್ದು ಗುಜರಾತ ಮಾದರಿಯಿಂದ ಪ್ರೇರೇಪಣೆಗೊಂಡು ಹೆಚ್ಚೆಚ್ಚು ಯುವಕರು ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗುತ್ತಿರುವುದು ಬಹುದಿನಗಳಿಂದ ಬೇರು ಬಿಟ್ಟು ಕುಳಿತಿರುವ ಹಿರಿಯ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ನಿಟ್ಟಿನಲ್ಲಿ ರಬಕವಿ - ಬನಹಟ್ಟಿಯ ಖ್ಯಾತ ಜವಳಿ ಉದ್ಯಮಿಗಳಾದ ಮಲ್ಲಿಕಾರ್ಜುನ ಜಯವಂತ ಬಾಣಕಾರರವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಕ್ರೀಯ ಕಾರ್ಯಕರ್ತರಾಗಿದ್ದು ಪಕ್ಷಕ್ಕಾಗಿ ಹಲವು ವರ್ಷಗಳ ಅಳಿಲು ಸೇವೆಯನ್ನು ಸಲ್ಲಿಸಿದ್ದು ಜನಸೇವೆಗೆ ಸದಾವಕಾಶವನ್ನು ಕೋರಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತೇರದಾಳ ಮತಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಪಕ್ಷದ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದು ತೇರದಾಳ ಮತಕ್ಷೇತ್ರ ನೇಕಾರರ ಕ್ಷೇತ್ರವಾಗಿದ್ದು ನಾವು ನೇಕಾರಾರ ಕುಟುಂಬದವರಿದ್ದು ತೇರದಾಳ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಆಶಯಗಳನ್ನು ಈಡೇರಿಸಲು ಇಂದು ಬಾಗಲಕೋಟ ಜಿಲ್ಲಾ ಭಾಜಪ ಕಾರ್ಯಲಯದ ಮೂಲಕ ಭಾಜಪ ರಾಜ್ಯಾಧ್ಯಕ್ಷರಿಗೆ ತಾವು ಭಾಜಪ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಮನವಿ ಸಲ್ಲಿಸಿದರು.

Social Plugin