ರಬಕವಿ-ಬನಹಟ್ಟಿ,ಜ16: ರಾಜ್ಯದಲ್ಲಿರುವ ಹಟಗಾರ ಸಮಾಜ ಒಗ್ಗೂಡುವ ದೃಷ್ಟಿಯಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಜಗದ್ಗುರುಗಳ ಪೀಠಾರೋಹಣಕ್ಕೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣ ಸಜ್ಜಾಗಿದೆ.ಈ ಕುರಿತು ಸೋಮವಾರ ಸಂಜೆ ಮಹತ್ವದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪೀಠಾಧ್ಯಕ್ಷರಾಗಲಿರುವ ಅಕ್ಕಲಕೋಟದ ಚಿಕ್ಕರೇವಣಸಿದ್ಧ ಜಗದ್ಗುರುಗಳು ಮಾತನಾಡಿ, ಫೆ.1,2 ಮತ್ತು 3 ರಂದು ಜರುಗಲಿರುವ ಹಟಗಾರ ಸಮಾಜದ ಜಗದ್ಗುರುಗಳ ಪೀಠಾರೋಹಣ ಕಾರ್ಯಕ್ರಮ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಲಿದ್ದು, ಸಮುದಾಯದ ಎಲ್ಲರೂ ಭಾಗವಹಿಸಬೇಕೆಂದರು.ಆಳAದದ ಚನ್ನಬಸವ ಪಟ್ಟದೇವರು ಮಾತನಾಡಿ, ಬಹುದಿನಗಳ ನಿರೀಕ್ಷೆಯಾಗಿದ್ದ ಹಟಗಾರ ಸಮಾಜದ ಬೇಡಿಕೆ ಈಡೇರುವಂತಾಗಿದ್ದು, ಬನಹಟ್ಟಿಯಈಶ್ವರಲಿಂಗ ಮೈದಾನದಲ್ಲಿ ಫೆ. 1 ಮತ್ತು 2 ರಂದು ಮೆರವಣಿಗೆ, ತಲಾಭಾರ, ಧರ್ಮ ಸಭೆ ಸೇರಿದಂತೆ ಫೆ 3 ರಂದ ಎಸ್‌ಆರ್‌ಎ ಮೈದಾನದಲ್ಲಿ ಜಗದ್ಗುರುಗಳ ಪೀಠಾರೋಹಣ ನೆರವೇರಲಿದೆ ಎಂದು ತಿಳಿಸಿದರು.ಶಂಕರ ಸೊರಗಾಂವಿ ಮಾತನಾಡಿ, ಬೃಹತ್ ಸಂಖ್ಯೆಯಲ್ಲಿ ಜನರು ಸೇರಲಿದ್ದು, ಅದೇ ದಿನ ಪೀಠದ ಅಡಿಗಲ್ಲು ಸಮಾರಂಭವೂ ಜರುಗಲಿದೆ ಎಂದರು.ಡಾ. ಎಂ.ಎಸ್. ದಡ್ಡೇನವರ, ಧನರಾಜ ಅರಳಿಕಟ್ಟಿ, ತೋಟಪ್ಪ ನಿಡಗುಂದಿ, ಸಲೋಚನಾ ಚಂದಾ, ಮಲ್ಲಪ್ಪ ಭಾವಿಕಟ್ಟಿ, ಆರ್.ಆರ್. ಖಾನಾಪುರ, ಬಸವರಾಜ ನಿಡಗುಂದಿ, ಶ್ರೀಶೈಲ ದಭಾಡಿ ಸೇರಿದಂತೆ ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಕಲಬುರಗಿ ಹೀಗೆ ಅನೇಕ ಜಿಲ್ಲೆಗಳ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Social Plugin